Publish Date: Tue, 26 Jun 2018 (16:35 IST)
Updated Date: Tue, 26 Jun 2018 (16:40 IST)
ಯಾವುದೂ ನಮ್ಮಿಷ್ಟದಂತೆ ಆಗುವುದಿಲ್ಲ. ಹೀಗಾಗಿ ನಾನು ಸಭಾಪತಿಯಾಗಿದ್ದೇನೆ ಎಂದು ನೂತನ ಸಭಾಪತಿ ಬಸವರಾಜ ಹೊರಟ್ಟಿ ಹೇಳಿಕೆ ನೀಡಿದ್ದಾರೆ.
ಶಿಕ್ಷಣ ಮಂತ್ರಿ ಆದರೆ ಕೇವಲ ಒಂದು ಖಾತೆ ಮೇಲೆ ಹಿಡಿತ ಇರುತಿತ್ತು. ಆದರೆ ಈಗ ಎಲ್ಲ ಖಾತೆಗಳ ಮೇಲೆ ನಿಗಾ ವಹಿಸಬಹುದಾಗಿದೆ ಎಂದರು.
ಲಿಂಗಾಯತ ಪ್ರತ್ಯೇಕ ಹೋರಾಟದಿಂದ ದೂರ: ಸಂವಿಧಾನದ ನಿಯಮದ ಪ್ರಕಾರ ನಾನು ಇನ್ನು ಮುಂದೆ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದಲ್ಲಿ ಪಾಲ್ಗೊಳ್ಳುವ ಅವಕಾಶ ಇಲ್ಲ. ಸಭಾಪತಿ ಸ್ಥಾನಕ್ಕೆ ಚ್ಯುತಿ ಬರದಂತೆ ನೋಡಿಕೊಳ್ಳುವುದಾಗಿ ತಿಳಿಸಿದರು.
ನಾನು ಸಭಾಪತಿಯಾಗಿ ಆಯ್ಕೆಯಾದರೆ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದ ಸ್ಥಾನಮಾನಗಳಿಗೆ ರಾಜೀನಾಮೆ ಸಲ್ಲಿಸುವುದಾಗಿ ಹೇಳಿದರು.