Select Your Language

Notifications

webdunia
webdunia
webdunia
webdunia

ಸ್ಪೀಕರ್ ರಮೇಶ್ ಕುಮಾರ್ ಗೇ ಪ್ರಮಾಣ ವಚನಕ್ಕೆ ಬಾಗಿಲು ಬಂದ್!

ಸ್ಪೀಕರ್ ರಮೇಶ್ ಕುಮಾರ್ ಗೇ ಪ್ರಮಾಣ ವಚನಕ್ಕೆ ಬಾಗಿಲು ಬಂದ್!
ಬೆಂಗಳೂರು , ಗುರುವಾರ, 7 ಜೂನ್ 2018 (09:20 IST)
ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರದ ನೂತನ ಸಚಿವರ ಪ್ರಮಾಣ ವಚನ ಸಮಾರಂಭ ನಿನ್ನೆ ರಾಜಭವನದಲ್ಲಿ ನಡೆದಿತ್ತು. ಆದರೆ ಈ ಸಮಾರಂಭಕ್ಕೆ ಸ್ಪೀಕರ್ ರಮೇಶ್ ಕುಮಾರ್ ಗೇ ಪ್ರವೇಶಿಸಲಾಗಲಿಲ್ಲ.

ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುತ್ತಿದ್ದ ರಾಜಭವನದಲ್ಲಿ ಉಂಟಾದ ಟ್ರಾಫಿಕ್ ಗೊಂದಲದಿಂದಾಗಿ ಒಳಗೆ ಪ್ರವೇಶಿಲಾಗದೇ ಸ್ಪೀಕರ್ ರಮೇಶ್ ಕುಮಾರ್ ಹೊರೆಗೆ ಅರ್ಧ ಗಂಟೆಗಳ ಕಾಲ ಕಾದು ಕೊನೆಗೆ ಬೇಸತ್ತು ಮರಳಿದ್ದಾರೆ. ಬಳಿಕ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದು ಖಡಕ್ ಆಗಿ ಅಸಮಾಧಾನ ಹೊರಹಾಕಿದ್ದಾರೆ.

ತಮ್ಮ ಆಹ್ವಾನದ ಮೇರೆಗೆ ಕಾರ್ಯಕ್ರಮಕ್ಕೆ ಬಂದು ಅರ್ಧಗಂಟೆ ಕಾದು ಅಸಹಾಯಕನಾಗಿ ಮರಳಿದ್ದೇನೆ. ಈ ಅವ್ಯವಸ್ಥೆಗೆ ಯಾರು ಕಾರಣ ಗೊತ್ತಿಲ್ಲ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹೊರತಾಗಿ ಸ್ಪೀಕರ್ ಸ್ಥಾನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೊಡ್ಡದು. ಸಭಾಪತಿಗಳು ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲೇಬೇಕು. ಇದು ಸರ್ಕಾರದ ಜವಾಬ್ದಾರಿಯಾಗಿರುತ್ತದೆ. ಆದರೆ ನಿಮ್ಮ ಅಧಿಕಾರಿಗಳ ಅಜ್ಞಾನ, ದುರಹಂಕಾರದಿಂದ ಈ ರೀತಿಯಾಗಿದೆ.

ಇವೆಲ್ಲವನ್ನೂ ಮೀರಿ ರಾಜಭವನದ ಒಳಗೆ ಮತ್ತು ಹೊರಗೆ ತುಂಬಿದ್ದ ವಾಹನಗಳು ಯಾರವು? ಇದಕ್ಕೆ ಅನುಮತಿ ನೀಡಿದವರು ಯಾರು? ಎಂದು ತಿಳಿದುಕೊಳ್ಳಲು ಬಯಸುತ್ತೇನೆ. ನಿಮ್ಮ ಅಕ್ಷಮ್ಯ ಅಪರಾಧಕ್ಕೆ ಈ ಮೂಲಕ ಪ್ರತಿಭಟನೆ ಸಲ್ಲಿಸುತ್ತೇನೆ’ ಎಂದು ರಮೇಶ್ ಕುಮಾರ್ ಪತ್ರದಲ್ಲಿ ಖಾರವಾಗಿ ನುಡಿದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದಲ್ಲಿ ವಿವಾಹವಾಗುವ ಎನ್ಆರ್ ಐಗಳಿಗೆ ಶಾಕ್ ನೀಡಿದ ಕೇಂದ್ರ