Publish Date: Wed, 06 Jun 2018 (12:28 IST)
Updated Date: Wed, 06 Jun 2018 (12:30 IST)
ಬೆಂಗಳೂರು: ಇಂದು ರಾಜ್ಯ ಸಮ್ಮಿಶ್ರ ಸರ್ಕಾರದ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಶಾಸಕರಿಗೆ ಕಾಂಗ್ರೆಸ್ ಹೈಕಮಾಂಡ್ ಶಾಕ್ ನೀಡಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಶಾಸಕ ಕೃಷ್ಣಭೈರೇಗೌಡ ಈ ಮಂತ್ರಿ ಹುದ್ದೆ ತಾತ್ಕಾಲಿಕ. ಆರು ತಿಂಗಳು ಅಥವಾ ಒಂದು ವರ್ಷದವರೆಗೆ ಮಾತ್ರ ಇಂದು ಪ್ರಮಾಣ ವಚನ ಸ್ವೀಕರಿಸಲಿರುವ ಶಾಸಕರಿಗೆ ಅವಕಾಶ ಸಿಗಲಿದೆ.
ಹೀಗಾಗಿ ಇಂದು ಅವಕಾಶ ವಂಚಿತರಾದವರು ನಿರಾಶರಾಗಬೇಕಿಲ್ಲ. ಮುಂದಿನ ದಿನಗಳಲ್ಲಿ ಅವರಿಗೂ ಅವಕಾಶ ಸಿಗಲಿದೆ ಎಂದು ಹೈಕಮಾಂಡ್ ನಿಂದ ಸೂಚನೆ ಬಂದಿರುವುದಾಗಿ ಕೃಷ್ಣಭೈರೇಗೌಡ ಬಹಿರಂಗಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.