Publish Date: Wed, 06 Jun 2018 (10:16 IST)
Updated Date: Wed, 06 Jun 2018 (10:17 IST)
ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರದ ನೂತನ ಸಚಿವ ಸಂಪುಟ ಸದಸ್ಯರು ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆದರೆ ಕಾಂಗ್ರೆಸ್ ನಲ್ಲಿ ಘಟಾನುಘಟಿಗಳಿಗೇ ಈ ಬಾರಿ ಸಚಿವ ಸ್ಥಾನ ಮಿಸ್ ಆಗಿದೆ.
ಕಳೆದ ಸರ್ಕಾರದಲ್ಲಿ ಗೃಹ ಮಂತ್ರಿಗಳಾಗಿದ್ದ ರಾಮಲಿಂಗಾ ರೆಡ್ಡಿ, ಜಲಸಂಪನ್ಮೂಲ ಖಾತೆ ಸಚಿವರಾಗಿದ್ದ ಎಂಬಿ ಪಾಟೀಲ್, ದಿನೇಶ್ ಗುಂಡೂರಾವ್ ಮುಂತಾದ ಘಟಾನುಘಟಿಗಳಿಗೇ ಈ ಬಾರಿ ಕಾಂಗ್ರೆಸ್ ಹೈಕಮಾಂಡ್ ಸಚಿವ ಸ್ಥಾನ ನೀಡಿಲ್ಲ.
ಬದಲಾಗಿ ಕಾಂಗ್ರೆಸ್ ನಿಂದ ಇದೇ ಮೊದಲ ಬಾರಿಗೆ ಸ್ಪರ್ಧಿ ಗೆದ್ದ ಜಮೀರ್ ಅಹಮ್ಮದ್ ಮುಂತಾದವರಿಗೆ ಟಿಕೆಟ್ ನೀಡಿದೆ. ಸಮ್ಮಿಶ್ರ ಸರ್ಕಾರವಾದ್ದರಿಂದ ಸೀಮಿತ ಸ್ಥಾನವಷ್ಟೇ ಪಕ್ಷಕ್ಕೆ ಸಿಕ್ಕಿದೆ. ಹೀಗಾಗಿ ಆದಷ್ಟು, ಪ್ರದೇಶವಾರು, ಜಾತಿವಾರು ಲೆಕ್ಕಾಚಾರ ಹಾಕಿ ಟಿಕೆಟ್ ನೀಡಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.