Select Your Language

Notifications

webdunia
webdunia
webdunia
webdunia

ಭಾರತೀಯ ರೈಲ್ವೆ ಇಲಾಖೆಯಿಂದ ಗ್ರಾಹಕರಿಗೊಂದು ಸಿಹಿ ಸಮಾಚಾರ!

ಭಾರತೀಯ ರೈಲ್ವೆ ಇಲಾಖೆಯಿಂದ  ಗ್ರಾಹಕರಿಗೊಂದು  ಸಿಹಿ ಸಮಾಚಾರ!
ನವದೆಹಲಿ , ಮಂಗಳವಾರ, 26 ಜೂನ್ 2018 (13:35 IST)
ನವದೆಹಲಿ: ಭಾರತೀಯ ರೈಲ್ವೆ ಇಲಾಖೆಯು  ಈಗ  700ಕ್ಕೂ ಹೆಚ್ಚು ರೈಲ್ವೆ ನಿಲ್ದಾಣಗಳಲ್ಲಿ  ಸಾರ್ವಜನಿಕರಿಗಾಗಿ  ಉಚಿತ ವೈ-ಫೈ ಸೇವೆಯನ್ನು ಕಲ್ಪಿಸುತ್ತಿದೆ. ಗೂಗಲ್‌ ಸಹಯೋಗದಲ್ಲಿ ಈ ಸೇವೆಯನ್ನು  ನೀಡಲಾಗುತ್ತಿದೆ. ರೈಲ್ವೆಯ ಅಧೀನ ಸಂಸ್ಥೆಯಾಗಿರುವ, ರೈಲ್‌ಟೆಲ್‌  ಇದರ ಕುರಿತು ಟ್ವೀಟ್‌ ಮಾಡಿದೆ.


ಇನ್ನು ಈ  ವೈ-ಫೈ ಸೇವೆಯಲ್ಲಿ  ಗ್ರಾಹಕರು 30 ನಿಮಿಷಗಳ ಕಾಲ ಉಚಿತವಾಗಿ ಇಂಟರ್‌ನೆಟ್‌ ಸೌಲಭ್ಯವನ್ನು ಪಡೆಯಬಹುದಂತೆ. ಈ ಉಚಿತ ವೈ-ಫೈ ವ್ಯವಸ್ಥೆಯೂ ನಗರದ 407 ರೈಲ್ವೆ ನಿಲ್ದಾಣಗಳಲ್ಲಿ ಮತ್ತು ಗ್ರಾಮೀಣ ಭಾಗದ  298 ರೈಲ್ವೆ ನಿಲ್ದಾಣಗಳಲ್ಲಿ ಲಭ್ಯ. ಕರ್ನಾಟಕಯೂ ಸೇರಿ 27 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಸೇವೆ ಸಿಗಲಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಾಶ್ಮೀರದಲ್ಲಿ ಹಿಂಸಾಚಾರ ಹೆಚ್ಚಿಸಿ ; ಬೆಂಬಲಿಗರಿಗೆ ಕರೆ ನೀಡಿದ ಹಫೀಜ್ ಸಯೀದ್