Publish Date: Thu, 24 May 2018 (09:56 IST)
Updated Date: Thu, 24 May 2018 (09:58 IST)
ಬೆಂಗಳೂರು: ವಿಧಾನಸಭೆ ಚುನಾವಣೆ ಕಳೆದಿದೆ. ಇದ್ಯಾವ ಚುನಾವಣೆ ಎಂದುಕೊಳ್ಳಬೇಡಿ. ನೂತನವಾಗಿ ಸರ್ಕಾರವೇನೋ ರಚನೆಯಾಗಿದೆ. ಆದರೆ ಇದೀಗ ಸ್ಪೀಕರ್ ಆಯ್ಕೆ ನಡೆಯಬೇಕಿದೆ.
ಈಗಾಗಲೇ ಸಮ್ಮಿಶ್ರ ಸರ್ಕಾರ ರಚಿಸಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ಅಭ್ಯರ್ಥಿಯಾಗಿ ಕಾಂಗ್ರೆಸ್ ನ ಆರ್ ರಮೇಶ್ ಕುಮಾರ್ ಅವರನ್ನು ಸ್ಪೀಕರ್ ಸ್ಥಾನಕ್ಕೆ ಆಯ್ಕೆ ಮಾಡಿದೆ.
ಇದೀಗ ಬಿಜೆಪಿ ಕೂಡಾ ತನ್ನ ಅಭ್ಯರ್ಥಿಯನ್ನು ಪ್ರಕಟಿಸಿದ್ದು, ಶಾಸಕ ಸುರೇಶ್ ಕುಮಾರ್ ಸ್ಪೀಕರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಇದೀಗ ಹೆಚ್ಚು ಮತ ಪಡೆದವರು ಸ್ಪೀಕರ್ ಆಗಿ ಮುಂದಿನ ಐದು ವರ್ಷಗಳಿಗೆ ಆಯ್ಕೆಯಾಗಲಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.