ಬೆಂಗಳೂರು: ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವರ ವಿರುದ್ಧದ ಮುಡಾ ಹಗರಣ ಸಂಬಂಧ ಒಂದೆಡೆ ಜಾರಿ ಬೆಂಗಳೂರು: ನಿರ್ದೇಶನಾಲಯ ತನಿಖೆ ಚುರುಕುಗೊಳಿಸಿದ್ದರೆ ಮತ್ತೊಂದೆಡೆ, ಲೋಕಾಯುಕ್ತ ತನಿಖೆಯನ್ನು ಅಂತಿಮ ಗೊಳಿಸಿದೆ. ಹಗರಣ ಸಂಬಂಧ ತನಿಖೆ ನಡೆಸಿರುವ ಲೋಕಾಯುಕ್ತ ಪೊಲೀಸರು ಐಜಿಪಿ ಸುಬ್ರಮಣ್ಯೇಶ್ವರ ರಾವ್ಗೆ ತನಿಖೆಯ ಅಂತಿಮ ವರದಿ ಸಲ್ಲಿಕೆ ಮಾಡಿದ್ದಾರೆ.
550ಪುಟಗಳ ವರದಿಯಲ್ಲಿ ಕೆಲ ಮಹತ್ವದ ಅಂಶಗಳನ್ನು ಉಲ್ಲೇಖ ಮಾಡಲಾಗಿದೆ.
ವರದಿಯಲ್ಲಿ ಕೆಲ ಕೆಲ ಅಧಿಕಾರಿಗಳು ನಿಯಮಗಳನ್ನು ಗಾಳಿಗೆ ತೂರಿರುವುದು ತಿಳಿದುಬಂದಿದೆ. ಮುಡಾದಲ್ಲಿ 14 ಸೈಟ್ ನೀಡುವ ಅವಶ್ಯಕತೆ ಇರಲಿಲ್ಲವೆಂದು ಉಲ್ಲೇಖ ಮಾಡಲಾಗಿದೆ.
ಸೈಟ್ ನೀಡುವ ಅವಶ್ಯಕತೆ ಇಲ್ಲದೇ ಇದ್ರೂ ಸೈಟ್ ನೀಡಿರುವುದು ಕಂಡುಬಂದಿದೆ ಎಂದು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅದಲ್ಲದೆ ಈ ಹಗರಣದಲ್ಲಿ ಯಾವುದೇ ರಾಜಕೀಯ ಒತ್ತಡಕ್ಕೆ ಒಳಗಾಗಿರುವುದು ಮೇಲ್ನೀಟಕ್ಕೆ ತಿಳಿದುಬಂದಿಲ್ಲ.
ಆದರೆ, ಕೆಲವೊಂದು ದಾಖಲೆಗಳು, 14 ಸೈಟ್ಗಳನ್ನು ನೀಡಿರುವ ಬಗ್ಗೆ ಉಲ್ಲೇಖ ಮಾಡಲಾಗಿದೆ.