Select Your Language

Notifications

webdunia
webdunia
webdunia
webdunia

ಮುಡಾ ಹಗರಣದ ಅಂತಿಮ ವರದಿ ಐಜಿಪಿಗೆ ಸಲ್ಲಿಕೆ, ವಾರದೊಳಗೆ ನ್ಯಾಯಾಲಯಕ್ಕೆ ಸಲ್ಲಿಕೆ ಸಾಧ್ಯತೆ

MUDA Scam, Chief Minister Siddaramaiah, Lokayukta Police Submitted Final Report TO IGP,

Sampriya

ಬೆಂಗಳೂರು , ಬುಧವಾರ, 12 ಫೆಬ್ರವರಿ 2025 (19:48 IST)
ಬೆಂಗಳೂರು:  ಮುಡಾ ಹಗರಣದ ತನಿಖೆ ನಡೆಸುತ್ತಿರುವ ಲೋಕಾಯಕ್ತ ಪೊಲೀಸರು ತನಿಖೆಯನ್ನು ಈಗಾಗಲೇ ಮುಕ್ತಾಯಗೊಳಿಸಿದ್ದು, ಈ ವಾರದೊಳಗೆ ಅಂತಿಮ ವರದಿಯನ್ನು  ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಲಿದ್ದಾರೆ.

ಈ ಮುನ್ನ ತನಿಖೆ ನಡೆಸಿದ ತನಿಖಾಧಿಕಾರಿ ಎಸ್‌ಪಿ ಉದೇಶ್, ತನ್ನ ಹಿರಿಯ ಅಧಿಕಾರಿಗಳಾದ ಐಜಿಪಿ ಸುಬ್ರಹ್ಮಣ್ಣೇಶ್ವರ ರಾವ್ ಮತ್ತು ಎಡಿಜಿಪಿ ಮನೀಶ್ ಕರ್ಬೀಕರ್‌ಗೆ ವರದಿಯ ಪ್ರತ್ಯೇಕ ಪ್ರತಿ ಸಲ್ಲಿಸಿದ್ದಾರೆ.

ವರದಿ ಪರಿಶೀಲಿಸಿ, ಇದುವರೆಗೆ ನಡೆದಿರುವ ತನಿಖೆಯ ಸರಿ-ತಪ್ಪುಗಳ ಪರಿಶೀಲನೆ ಮಾಡಲಿರುವ ಹಿರಿಯ ಅಧಿಕಾರಿಗಳು, ಮತ್ತೆ ಲೋಕಾಯುಕ್ತ ಎಸ್‌ಪಿ ಉದೇಶ್‌ಗೆ ಕೋರ್ಟ್‌ಗೆ ವರದಿ ಸಲ್ಲಿಕೆ ಮಾಡಲು ಸೂಚಿಸಲಿದ್ದಾರೆ.

ಸಿಕ್ಕಿರುವ ಮಾಹಿತಿ ಪ್ರಕಾರ, ಇದೇ ವಾರದ ಅಂತ್ಯದೊಳಗೆ ಮುಡಾ ಹಗರಣದ ಅಂತಿಮ ವರದಿಯನ್ನು ಜನಪ್ರತಿನಿಧಿಗಳ ನ್ಯಾಯಾಲಯದ ಮುಂದೆ ಸಲ್ಲಿಕೆ ಮಾಡಲಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯ ಸರ್ಕಾರ ಪತ್ರ ಬರೆದರೆ ಮೆಟ್ರೋ ದರ ಇಳಿಕೆ ಸಾಧ್ಯ: ಸಂಸದ ತೇಜಸ್ವಿ ಸೂರ್ಯ