ಮೂಡಲಗಿ: ಮಿಸ್ ಫೂರ್ ಆಗಿ ತಾಲ್ಲೂಕಿನ ಕಲ್ಲೋಳಿಯ ಯೋಧ ಪ್ರವೀಣ ಸುಭಾಷ ಖಾನಗೌಡ್ರ (24) ಬುಧವಾರ ಸಾವನ್ನಪ್ಪಿರುವ ಘಟನೆ ಚೆನ್ನೈನ ಭಾರತೀಯ ನೌಕಾ ಪಡೆಯಲ್ಲಿ ನಡೆದಿದೆ. ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ತಲೆಗೆ ಗುಂಡು ತಗುಲಿ ಮರಣ ಹೊಂದಿದ್ದಾರೆ.
ಪ್ರವೀಣ 2020ರ ಫೆ.12ರಂದು ಭಾರತೀಯ ನೌಕಾಪಡೆಗೆ ಸೇರಿದ್ದರು. ಕೊಚ್ಚಿ, ಅಂಡಮಾನ್‌ದಲ್ಲಿ ಸೇವೆ ಸಲ್ಲಿಸಿ ಈಚೆಗೆ ಚೆನ್ನೈಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಸಾಯುವುದಕ್ಕೆ ಒಂದು ತಾಸಿಗೆ ಮುನ್ನ ಪೋಷಕರಿಗೆ ಕರೆ ಮಾಡಿದ ಪ್ರವೀಣ ಆರೋಗ್ಯವಾಗಿ ಇರುವುದಾಗಿ ಹೇಳಿದ್ದರು. ಬಳಿಕ ತಲೆಗೆ ಗುಂಡು ತಾಗಿ ಸತ್ತಿದ್ದಾರೆ ಎಂಬ ಸುದ್ದಿ ಬಂತು. ಇದು 'ಮಿಸ್ ಫೈರ್' ಎಂದು ಸೇನಾಧಿಕಾರಿಗಳು ತಿಳಿಸಿದ್ದು, ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.