Select Your Language

Notifications

webdunia
webdunia
webdunia
webdunia

ಬೆಂಗಳೂರು ಅಭಿವೃದ್ಧಿ ಇಲಾಖೆ ಸಚಿವರ ಬದಲಾಯಿಸಿ; ಸಿಎಂಗೆ ಶಾಸಕ ಮುನಿರತ್ನ ಪತ್ರ

Bangalore Development Department Minister, MLA RajaRajeshwari Nagara MLA Munirtna, Chief Minister Siddaramaiah

Sampriya

ಬೆಂಗಳೂರು , ಗುರುವಾರ, 13 ಫೆಬ್ರವರಿ 2025 (17:07 IST)
ಬೆಂಗಳೂರಿನ ಒಳಿತಿಗೆ ಯಾರನ್ನಾದರೂ ಉಸ್ತುವಾರಿ ಸಚಿವರನ್ನಾಗಿ ಮಾಡಿ ಎಂದು ಹೇಳುವ ಮೂಲಕ ಬೆಂಗಳೂರು ಅಭಿವೃದ್ಧಿ ಇಲಾಖೆ ಸಚಿವರ ಬದಲಾವಣೆಗೆ ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಆಗ್ರಹಿಸಿ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ.

ಪತ್ರದಲ್ಲಿ 16ನೇ ಬಜೆಟ್​ನಲ್ಲಿ ಬೆಂಗಳೂರು ನಗರಕ್ಕೆ ನೀಡುವ ಅನುದಾನ ಸಂಬಂಧ ಉಲ್ಲೇಖಿಸಿ, ಬೆಂಗಳೂರಿನ ಒಳಿತಿಗೆ ಯಾರನ್ನಾದರೂ ಉಸ್ತುವಾರಿ ಸಚಿವರನ್ನಾಗಿ ಮಾಡಿ ಎಂದು ಆಗ್ರಹಿಸಿದ್ದಾರೆ.

ಆಂಧ್ರ ಸಿಎಂ ಸಹಚರರು, ಗುತ್ತಿಗೆದಾರರು ನಮ್ಮ ರಾಜ್ಯದ ಗುತ್ತಿಗೆದಾರರ ಮೇಲೆ ಸವಾರಿ ಮಾಡಲು ಬಂದಿದ್ದಾರೆ. ಹೊರ ರಾಜ್ಯದ ಗುತ್ತಿಗೆದಾರರಿಗೆ ಶೇ 12ರಷ್ಟು ಮುಂಗಡ ಅನುದಾನ ನೀಡಿದ್ದಾರೆ. ಅನುದಾನ ಖರೀದಿ ಮಾಡಲು ಶೇ 12ರಷ್ಟು ಮುಂಗಡ ಹಣ ನೀಡಿದ್ದಾರೆ. ಕಾರ್ಯಾದೇಶ ಕೊಟ್ಟ ನಂತರ ಶೇ 8, ಅನುದಾನ ಬಿಡುಗಡೆ ಮಾಡಲು ಶೇ 15 ರಷ್ಟು ಸೇರಿ ಒಟ್ಟಾರೆ‌ ಶೇ 35 ಕ್ಕೆ ವ್ಯವಹಾರ ಕುದುರಿಸಿ ಮುಂಗಡ ಹಣ ನೀಡಿದ್ದಾರೆ.

ಈ ಸಂಬಂಧ ಈಗಾಗಲೇ ಫೈವ್ ಸ್ಟಾರ್‌ ಹೋಟೆಲ್‌ಗಳಲ್ಲಿ ವ್ಯವಹಾರ ಕುದುರಿಸಿದ್ದಾರೆ ಎಂದು ಬೆಂಗಳೂರು ಅಭಿವೃದ್ಧಿ ಇಲಾಖೆ ಸಚಿವರ ವಿರುದ್ಧ ಮುನಿರತ್ನ ಆರೋಪ ಮಾಡಿದ್ದಾರೆ.

ಬೆಂಗಳೂರು ನಗರದ ಉಸ್ತುವಾರಿ ಸಚಿವರಾಗಿ ರಾಮಲಿಂಗಾರೆಡ್ಡಿ, ಕೆ.ಜೆ.ಜಾರ್ಜ್ ಅವರನ್ನು ಮರು ನೇಮಕ ಮಾಡಬಹುದು ಎಂದು ಮುನಿರತ್ನ ಸಿಎಂಗೆ ಸಲಹೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಿಕ್ಕಮಗಳೂರು: ನೇಣು ಬಿಗಿದುಕೊಂಡು ಸರ್ವೇ ಅಧಿಕಾರಿ ಆತ್ಮಹತ್ಯೆ, ಸಾವಿನ ಸುತ್ತ ಹಲವು ಅನುಮಾನ