ಹಾಡು ಹಗಲೇ ಜೂಜುಕೋರರ ಹಾವಳಿ

ಶುಕ್ರವಾರ, 9 ನವೆಂಬರ್ 2018 (18:30 IST)
ಹಾಡು ಹಗಲೇ ಜೂಜುಕೋರರ ಹಾವಳಿ ಹೆಚ್ಚಾದ ಘಟನೆ ನಡೆದಿದೆ.  ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ದಿಬ್ಬೂರಹಳ್ಳಿ ಗ್ರಾಮದ ಹಿಂದುಳಿದ ವರ್ಗಗಳ ವಸತಿ ಶಾಲೆಯ ಆವರಣದಲ್ಲೆ ಜೂಜು ಕೋರರ ಡವ್ವಾಟ ಶುರುವಾಗಿದೆ.

ಬಿ ಸಿ ಎಂ ಹಾಸ್ಟಲ್ ಆವರಣವನ್ನೆ ಜೂಜು ಅಡ್ಡೆಯನ್ನಾಗಿಸಿಕೊಂಡಿರುವ ಜೂಜುಕೋರರು ಸ್ಥಳೀಯರ ಕಿರಿಕಿರಿಗೂ ಕಾರಣರಾಗಿದ್ದಾರೆ. ಸುಮಾರು 50 ಕ್ಕೂ ಹೆಚ್ಚಿನ ಜನ ಜೂಜಿನಲ್ಲಿ ಭಾಗಿಯಾಗಿದ್ದರು.

ಸಾವಿರಾರು ರೂ.ಗಳ ಪಂದ್ಯ ಕಟ್ಟಿಕೊಂಡರೂ ಹೇಳೋರು ಕೇಳೋರು ಯಾರು ಇಲ್ಲದಂತಾಗಿದೆ. ಶಿಡ್ಲಘಟ್ಟ ತಾಲ್ಲೂಕಿನ ದಿಬ್ಬೂರಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.  ಹಾಸ್ಟೆಲ್ನ ವಿದ್ಯಾರ್ಥಿಗಳು ಸಹ ಜೂಜಿಗೆ ಒಳಗಾಗುವ ಶಂಕೆ ವ್ಯಕ್ತವಾಗಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕುಕ್ಕರ್ ಸಿಡಿದು ಮಗುವಿಗೆ ಗಾಯ