Publish Date: Tue, 02 Oct 2018 (16:01 IST)
Updated Date: Tue, 02 Oct 2018 (16:04 IST)
ಗಾಂಧಿ ಜಯಂತಿ ದಿನದಂದು ಕುಡುಕರ ಹಾವಳಿ ಮಿತಿಮೀರಿದ ಘಟನೆ ನಡೆದಿದೆ.
ದಾವಣಗೆರೆಯ ಮಹಾನಗರ ಪಾಲಿಕೆ ಹಿಂಭಾಗದಲ್ಲಿ ರಾಜರೋಷವಾಗಿ ಎಣ್ಣೆ ಪಾರ್ಟಿ ನಡೆಯಿತು. ಗಾಂಧಿ ಜಯಂತಿ ದಿನಾಚರಣೆ ಸಂದರ್ಭದಲ್ಲಿ ಅಪವಾದವೆನ್ನುವಂತೆ ಕುಡುಕರು ನಡೆದುಕೊಂಡಿದ್ದಾರೆ.
ದಾವಣಗೆರೆಯ ಪಾಲಿಕೆ ಹಿಂಭಾಗ ಬೆಳ್ಳಂಬೆಳಿಗ್ಗೆ ಪಾರ್ಟಿ ಮಾಡಿರುವ ಕುಡುಕರು, ಮದ್ಯಪಾನ ನಿಷೇಧ ಇದ್ದರೂ ಅದನ್ನು ಲೆಕ್ಕಿಸದೇ ರಾಜಾರೋಷವಾಗಿ ಎಣ್ಣೆ ಪಾರ್ಟಿ ಮಾಡಿದ್ದಾರೆ.
ಸಾರ್ವಜನಿಕ ಸ್ಥಳದಲ್ಲಿ ಎಣ್ಣೆ ಪಾರ್ಟಿ ಮಾಡಿದ ಕುಡುಕರ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಣ್ಣೆ ಪಾರ್ಟಿ ಮಾಡಿದ ಕುಡುಕರು ಬಡಾವಣೆ ಠಾಣಾ ಪೊಲೀಸರ ವಶಕ್ಕೆ ಒಳಪಟ್ಟಿದ್ದಾರೆ.