Select Your Language

Notifications

webdunia
webdunia
webdunia
webdunia

ಮಲೆನಾಡಿನಲ್ಲಿ ಹೆಚ್ಚಾದ ಕಾಡಾನೆ ಹಾವಳಿ

ಮಲೆನಾಡಿನಲ್ಲಿ ಹೆಚ್ಚಾದ ಕಾಡಾನೆ ಹಾವಳಿ
ಚಿಕ್ಕಮಗಳೂರು , ಮಂಗಳವಾರ, 21 ಆಗಸ್ಟ್ 2018 (17:44 IST)
ಒಂದೆಡೆ ಬಿಟ್ಟು ಬಿಟ್ಟು ಸುರಿಯುತ್ತಿರುವ ಧಾರಾಕಾರ ಮಳೆ‌… ಭೂ ಕುಸಿತದ ಜೊತೆಗೆ ಕಾಡಾನೆ ಹಾವಳಿ ಅಲ್ಲಿನ ಜನರನ್ನು ತತ್ತರಗೊಳ್ಳುವಂತೆ ಮಾಡಿದೆ…

ಕಾಡು ಬಿಟ್ಟು ನಾಡಿಗೆ ಎಂಟ್ರಿ ನೀಡುತ್ತಿರುವ ಕಾಡಾನೆಗಳು ಏಕಾಏಕಿ ಗ್ರಾಮದ ‌ರಸ್ತೆಯಲ್ಲಿ ಪ್ರತ್ಯಕ್ಷವಾಗುತ್ತಿವೆ.
ಚಿಕ್ಕಮಗಳೂರುನಲ್ಲಿ Ksrtc ಬಸ್ ಗೆ ಅಡ್ಡಲಾಗಿ ನಿಂತ ಕಾಡಾನೆ ಕಂಡು ಪ್ರಯಾಣಿಕರು ಹೌಹಾರಿದರು. ಬೆಳಗ್ಗೆ ನಡೆದ ಘಟನೆ ಇದಾಗಿದೆ. ಬಸ್ ಪ್ರಯಾಣಿಕನ ಮೊಬೈಲ್ ನಲ್ಲಿ‌ ಕಾಡಾನೆ ಚಲನವಲನ ರೆಕಾರ್ಡ್ ಮಾಡಲಾಗಿದೆ. ಮೂಡಿಗೆರೆ ತಾಲೂಕಿನ ಮೂಲಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮೂಲಹಳ್ಳಿಯಲ್ಲಿ ಒಂದು ಕಡೆ ಧಾರಾಕಾರ ಮಳೆ‌, ಭೂ ಕುಸಿತದ ಜೊತೆಗೆ ಕಾಡಾನೆ ಭಯದಲ್ಲಿ ‌ಮಲೆನಾಡಿಗರು ಇರುವಂತಾಗಿದೆ. ಮೂಡಿಗೆರೆ ತಾಲೂಕಿನ ಗುತ್ತಿ ಹಳ್ಳಿ ಮೂಲಹಳ್ಳಿ‌ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಕಾಡಾನೆಗಳು, ಆಹಾರ ಅರಸಿಕೊಂಡು ಕಾಡಿನಿಂದ‌ ನಾಡಿಗೆ ಬರುತ್ತಿವೆ.



 

Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಸಚಿವ ಕುಲಕರ್ಣಿಯಿಂದ ಸಂತ್ರಸ್ತರಿಗೆ ನೆರವು