ಗರ್ಭಿಣಿ ಪತ್ನಿಯ ಹತ್ಯೆಗೆ ಪಾಪಿ ಗಂಡ ಪ್ಲಾನ್‌

Webdunia
ಮಂಗಳವಾರ, 18 ಜುಲೈ 2023 (15:49 IST)
ಪತ್ನಿಯನ್ನ ಕೊಲ್ಲಲು ಅಪಘಾತ ಎಸಗಿದ್ದ ಪಾಪಿ ಪತಿ ಹಾಗೂ ಮತ್ತೋರ್ವ ಆರೋಪಿಯನ್ನ ಬರೋಬ್ಬರಿ 6 ತಿಂಗಳ ಬಳಿಕ ಬಂಧಿಸುವಲ್ಲಿ ಬಾಗಲೂರು ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ. ಅರವಿಂದ ಹಾಗೂ ಉದಯ್ ಕುಮಾರ್ ಬಂಧಿತ ಆರೋಪಿಗಳು.ಜನವರಿ ಒಂದನೇ ತಾರೀಖು ಬಾಗಲೂರಿನ ಕೆಐಡಿಬಿ ಲೇಔಟ್ ನಲ್ಲಿ ದ್ವಿಚಕ್ರ ವಾಹನದಲ್ಲಿ‌ ಬರುತ್ತಿದ್ದ ಚೈತನ್ಯ ಎಂಬಾಕೆಗೆ ಅಪಘಾತವೆಸಗಿದ್ದ ಪ್ರಕರಣದ ತನಿಖೆ ಕೈಗೊಂಡ ಬಾಗಲೂರು ಪೊಲೀಸರು ಆಕೆಯ ಪತಿ ಅರವಿಂದ್ ಹಾಗೂ ಆತನ ಸಹಚರ ಉದಯ್ ಕುಮಾರ್ ನನ್ನ ಬಂಧಿಸಿದ್ದಾರೆ‌.
 
ಒಂದೂವರೆ ವರ್ಷದ ಹಿಂದೆ ವಿವಾಹವಾಗಿದ್ದ ಅರವಿಂದ ಮತ್ತು ಚೈತನ್ಯ ದಂಪತಿ ಮಧ್ಯೆ ಕಲಹ ಆರಂಭವಾಗಿತ್ತು. ತನ್ನ ತಂದೆ ತಾಯಿಯನ್ನ ಪತ್ನಿ ಚೈತನ್ಯಳೇ ತನ್ನಿಂದ ದೂರ ಮಾಡಿದಳು ಎಂದು ಅರವಿಂದ್ ಕೋಪಗೊಂಡಿದ್ದ. ಇದೇ ಕೋಪದಿಂದ ಒಂದೂವರೆ ವರ್ಷಕ್ಕೆ ವಿಚ್ಛೇದನ ಕೊಡುವಂತೆ ಪತ್ನಿಯನ್ನ ಪೀಡಿಸಲಾರಂಭಿಸಿದ್ದ. ಆದರೆ ವಿಚ್ಛೇದನ ನೀಡಲು ಚೈತನ್ಯ ಒಪ್ಪಿರಲಿಲ್ಲ. ಹಾಗಾಗಿ  ಅಕೆಯನ್ನ ಕೊಲೆ ಮಾಡಲು ಅರವಿಂದ್ ನಿರ್ಧರಿಸಿದ್ದ. ಅಪಘಾತವಾದಂತೆ ಕೊಲೆ ಮಾಡಲು ಪ್ಲಾನ್ ರೂಪಿಸಿಕೊಂಡು ಅದಕ್ಕಾಗಿ ಹಳೆಯದೊಂದು ಟಾಟಾ ಸುಮೋ ಕಾರು ಖರೀದಿಸಿದ್ದ. ಬಳಿಕ ಅದಕ್ಕೆಂದೇ ಉದಯ್ ಕುಮಾರ್ ಎಂಬ ಚಾಲಕನನ್ನ ನೇಮಿಸಿಕೊಂಡಿದ್ದ. ಭರತ ನಾಟ್ಯ ಕ್ಲಾಸ್ ಮುಗಿಸಿಕೊಂಡು‌ ಬರುವಾಗ ಟಾಟಾ ಸುಮೋದಲ್ಲಿ‌ ಬಂದು ಅಪಘಾತ ‌ಮಾಡಿ ಎಸ್ಕೇಪ್ ಆಗಿದ್ರು ಪ್ರಕರಣ ದಾಖಲಿಸಿಕೊಂಡ ದೇವನಹಳ್ಳಿ ಟ್ರಾಫಿಕ್ ಪೋಲಿಸರು ಬಾಗಲೂರಿಗೆ ವರ್ಗಾವಣೆ ಮಾಡಿದ್ರು. ತನಿಖೆ ಕೈಗೊಂಡ ಅದ ಅಸಲಿ‌ ಕಹನಿ ಬೆಳಕಿಗೆ ಬಂದಿದೆ. ಆರೋಪಿಗಳು ‌ಈಗ ಜೈಲು ಪಾಲಾಗಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿದ್ದರಾಮಯ್ಯ, ಶಿವಕುಮಾರ್‌ ಊಟ, ತಿಂಡಿ ಮಾಡಿಕೊಂಡೇ ಎರಡೂವರೆ ವರ್ಷ ಕಳೆದ್ರು: ಶ್ರೀರಾಮುಲು ವ್ಯಂಗ್ಯ

ಬಾಲಕಿಗೆ ಲೈಂಗಿಕ ಕಿರುಕುಳ ಕೇಸ್: ಬಿಎಸ್ ಯಡಿಯೂರಪ್ಪ ಕೇಸ್ ಗೆ ಮಹತ್ವದ ಆದೇಶ ಕೊಟ್ಟ ಸುಪ್ರೀಂಕೋರ್ಟ್

ಬ್ರೇಕ್ ಫಾಸ್ಟ್ ಮುಗಿಸಿ ಮಹತ್ವದ ಹೇಳಿಕೆ ಬಿಡುಗಡೆ ಮಾಡಿದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

Arecanut Price: ಅಡಿಕೆ, ಕೊಬ್ಬರಿ ಇಂದಿನ ಬೆಲೆ ಇಲ್ಲಿದೆ

ಮುಂದಿನ ಸುದ್ದಿ
Show comments