ಕರಾವಳಿ ಹಿಂದುತ್ವದ ಲ್ಯಾಬೋರೇಟರಿ ಇದ್ದ ಹಾಗೆ: ಸಿದ್ದರಾಮಯ್ಯ

ಶುಕ್ರವಾರ, 26 ಅಕ್ಟೋಬರ್ 2018 (10:16 IST)
ಶಿವಮೊಗ್ಗ: ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ಮತ್ತು ಬಿಎಸ್ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
 

‘ಕರಾವಳಿ ಎಂದರೆ ಹಿಂದುತ್ವದ ಲ್ಯಾಬೋರೇಟರಿ ಇದ್ದ ಹಾಗೆ. ನಮಗೆ ಹಾರ್ಡ್, ಸಾಫ್ಟ್ ಹಿಂದುತ್ವ ಅಂತೇನಿಲ್ಲ. ಹಿಂದುತ್ವದ ವಿಚಾರದಲ್ಲಿ ನನಗೂ ಬಿಎಸ್ ವೈಗೂ ವ್ಯತ್ಯಾಸವೇನಿದೆ? 2013 ರಲ್ಲಿ ಕರಾವಳಿಯಲ್ಲಿ ನಾವು ಹೆಚ್ಚು ಸ್ಥಾನ ಗೆದ್ದಿದ್ದೆವು. ಆದರೆ ಬಿಜೆಪಿ ಅಪಪ್ರಚಾರದಿಂದ ನಾವು ಕಳೆದ ಬಾರಿ ಹಿನ್ನಡೆ ಅನುಭವಿಸಿದ್ದೆವು. ಆದರೆ ಈ ಬಾರಿ ಹಾಗಾಗದಂತೆ ಬಂದೋಬಸ್ತ್ ಮಾಡಿದ್ದೇವೆ’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಇನ್ನು, ಕೇಂದ್ರದಲ್ಲಿ ಸಿಬಿಐ ನಿರ್ದೇಶಕರ ನಡುವಿನ ಕಚ್ಚಾಟದ ಬಗ್ಗೆಯೂ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ ಹಿಂದೆ ಸಿಬಿಐ ಮೇಲೆ ನಂಬಿಕೆಯಿತ್ತು. ಆದರೆ ಈಗ ಕೇಂದ್ರ ಸರ್ಕಾರ ಸಿಬಿಐ ಮೇಲೆ ಹಸ್ತಕ್ಷೇಪ ಮಾಡುತ್ತಿರುವುದರಿಂದ ನಿರ್ದೇಶಕರ ನಡುವೆಯೇ ಕಚ್ಚಾಟ ಶುರುವಾಗಿದೆ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ನಮ್ಮ ಬಾಗಿಲು ಮುಚ್ಚಿಸಲು ಅವರು ಯಾರು? ದೇವೇಗೌಡರಿಗೆ ಬಿಎಸ್ ವೈ ಪ್ರಶ್ನೆ