Select Your Language

Notifications

webdunia
webdunia
webdunia
Thursday, 24 April 2025
webdunia

ಉಪಚುನಾವಣೆಯಲ್ಲಿ ಗೆಲುವು ನಮ್ಮದೇ ಎಂದ ಬಿಜೆಪಿ ಸಂಸದೆ

ಆಪರೇಷನ್ ಕಮಲ
ಗದಗ , ಗುರುವಾರ, 25 ಅಕ್ಟೋಬರ್ 2018 (16:46 IST)
ನಾವು ಆಪರೇಷನ್ ಕಮಲ ಮಾಡಲ್ಲ. ಆ ರೀತಿಯ ತೀರ್ಮಾನ ಆಗಿದೆ. ಶಿವಮೊಗ್ಗ, ಬಳ್ಳಾರಿ, ಜಮಖಂಡಿಯಲ್ಲಿ ನೂರಕ್ಕೆ ನೂರು ಗೆಲ್ತೀವಿ ಎಂದು ಸಂಸದೆ ಶೋಭಾ ಕರಂದ್ಲಾಜೆ ವಿಶ್ವಾಸ ವ್ಯಕ್ತಪಡಿಸಿದರು.

ಗದಗ ಸಿದ್ಧಲಿಂಗ ಸ್ವಾಮಿಜಿ ಲಿಂಗೈಕ್ಯರಾದ ಹಿನ್ನೆಲೆ ಮಠಕ್ಕೆ ಭೇಟಿ ಕೊಟ್ಟು ಮಾಧ್ಯಮರೊಂದಿಗೆ ಮಾತನಾಡಿದ ಅವರು, ಬಿಜೆಪಿಯಿಂದ 105 ಎಂಎಲ್ಎಗಳಾದ ಮೇಲೆ ರಾಜ್ಯದ ರಾಜಕೀಯ ಚಿತ್ರಣ ಬದಲಾಗುತ್ತೆ. ಕಾಂಗ್ರೆಸ್​ನ ಒಳಜಗಳದಿಂದ ಕಾಂಗ್ರೆಸ್ ಶಾಸಕರೇ ದಿನಕ್ಕೊಬ್ಬರು ಬಂಡಾಯ ಏಳ್ತಿದ್ದಾರೆ. ಸರ್ಕಾರದಲ್ಲಿ ಏನೂ ಸರಿಯಿಲ್ಲ. ಕುಮಾರಸ್ವಾಮಿ ಹಾಗೂ ರೇವಣ್ಣ ಅವರು ಕಾಂಗ್ರೆಸ್​ ಶಾಸಕರ ಕೆಲಸ ಮಾಡಿಕೊಡ್ತಿಲ್ಲ ಅಂತ ಮಾತಾಡ್ತಿದ್ದಾರೆ. ಹೀಗಾಗಿ ಕಾಂಗ್ರೆಸ್​ನ ಅವನತಿ ತಕ್ಷಣದಿಂದ ಆರಂಭವಾಗುತ್ತೆ ಎಂದರು.

ಸೋಮಣ್ಣ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಂಸದೆ ಶೋಭಾ, ಸೋಮಣ್ಣ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ. ಬಿಎಸ್​ವೈ ಅವರ ನೇತೃತ್ವದಲ್ಲಿ ಚುನಾವಣೆ ನಡೆಯುತ್ತಿದೆ. ಹೈಕಮಾಂಡ್ ಸಹ ಯಡಿಯೂರಪ್ಪನವರ ಮೇಲೆ ವಿಶ್ವಾಸವಿಟ್ಟಿದೆ ಎಂದು ಹೇಳಿದರು.



Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯ ಕ್ಷಮೆ ಕೇಳಲಿ ಎಂದ ಬಿ.ಎಸ್.ವೈ