ನಮ್ಮ ಬಾಗಿಲು ಮುಚ್ಚಿಸಲು ಅವರು ಯಾರು? ದೇವೇಗೌಡರಿಗೆ ಬಿಎಸ್ ವೈ ಪ್ರಶ್ನೆ

ಶುಕ್ರವಾರ, 26 ಅಕ್ಟೋಬರ್ 2018 (09:57 IST)
ಬೆಂಗಳೂರು: ದಕ್ಷಿಣ ಭಾರತದಲ್ಲಿ ಬಿಜೆಪಿಯ ಹೆಬ್ಬಾಗಿಲು ಮುಚ್ಚಿಸುತ್ತೇನೆ ಎಂಬ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡರ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.
 

ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್ ವೈ ‘ದಕ್ಷಿಣ ಭಾರತದಲ್ಲಿ  ಬಿಜೆಪಿ ಹೆಬ್ಬಾಗಿಲು ಮುಚ್ಚಿಸುತ್ತೇವೆ ಎನ್ನಲು ಅವರು ಯಾರು? ಅವರಿಗೆ ತಾಕತ್ತಿದ್ದರೆ ಮೂರು ಸಂಸತ್ ಸ್ಥಾನ ಗೆಲ್ಲಿಸಲಿ ನೋಡೋಣ. ಬರೀ 37 ಸೀಟು ಇಟ್ಟುಕೊಂಡು ಇಷ್ಟೆಲ್ಲಾ ಮಾತನಾಡುತ್ತಾರಾ?’ ಎಂದು ಬಿಎಸ್ ವೈ ವಾಗ್ದಾಳಿ ನಡೆಸಿದ್ದಾರೆ.

ಮೊನ್ನೆಯಷ್ಟೇ ದೇವೇಗೌಡರು ಚುನಾವಣಾ ಪ್ರಚಾರವೊಂದರಲ್ಲಿ ಈ ಮಾತು ಹೇಳಿದ್ದರು. ಅದಕ್ಕೆ ರಾಜ್ಯ ಬಿಜೆಪಿ ಕೂಡಾ ತಕ್ಷಣವೇ ತಿರುಗೇಟು ನೀಡಿತ್ತು. ಇದೀಗ ಬಿಎಸ್ ವೈ ಸರದಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮಾಜಿ-ಹಾಲಿ ಸಿಎಂಗಳ ಪ್ರಚಾರ ಭರಾಟೆ ಜೋರು