ಮಾಜಿ-ಹಾಲಿ ಸಿಎಂಗಳ ಪ್ರಚಾರ ಭರಾಟೆ ಜೋರು

ಶುಕ್ರವಾರ, 26 ಅಕ್ಟೋಬರ್ 2018 (09:46 IST)
ಬೆಂಗಳೂರು: ಲೋಕಸಭೆ ಉಪಚುನಾವಣೆಗೆ ಇಂದು ಮಾಜಿ ಮತ್ತು ಹಾಲಿ ಸಿಎಂಗಳ ಪ್ರಚಾರ ಭರಾಟೆ ವಿವಿಧ ಕ್ಷೇತ್ರಗಳಲ್ಲಿ ಜೋರಾಗಿ ನಡೆಯಲಿದೆ.

ಜಮಖಂಡಿಯಲ್ಲಿ ಇಂದಿನಿಂದ ಮೂರು ದಿನಗಳವರೆಗೆ ಪ್ರವಾಸ ಮಾಡಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಅಭ್ಯರ್ಥಿ ಪರವಾಗಿ ಮತ ಭೇಟೆ ನಡೆಸಲಿದ್ದಾರೆ.

ಹಾಲಿ ಸಿಎಂ ಕುಮಾರಸ್ವಾಮಿ ಮತ್ತು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಇಂದು ಮಂಡ್ಯದಲ್ಲಿ ಬಿರುಸಿನ ಪ್ರಚಾರ ನಡೆಸಲಿದ್ದಾರೆ. ಜೆಡಿಎಸ್ ಭದ್ರಕೋಟೆಯಾಗಿರುವ ಮಂಡ್ಯದಲ್ಲಿ ಶಿವರಾಮೇಗೌಡರ ಪರವಾಗಿ ಸಿಎಂ ಎಚ್ ಡಿಕೆ ವಿವಿಧ ಕಡೆ ರೋಡ್ ಶೋ ನಡೆಸಲಿದ್ದಾರೆ. ಇದೇ ವೇಳೆ ಬಿಎಸ್ ವೈ ಕೂಡಾ ತಮ್ಮ ಪಕ್ಷದ ಅಭ್ಯರ್ಥಿ ಡಾ. ಸಿದ್ದರಾಮ ಪರ ಪ್ರಚಾರ ನಡೆಸಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ನಾಯಿ ಅಟ್ಟಿಸಿಕೊಂಡು ಬಂತೆಂದು ಸ್ಪೀಡಾಗಿ ಬೈಕ್ ಓಡಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಯುವಕ