Publish Date: Fri, 19 Dec 2025 (13:25 IST)
Updated Date: Fri, 19 Dec 2025 (13:27 IST)
ಬೆಳಗಾವಿ: ಸಿಎಂ ಬದಲಾವಣೆ ವಿಚಾರವಾಗಿ ಸಿದ್ದರಾಮಯ್ಯ ಇಂದು ಸದನದಲ್ಲಿ ಘೋಷಿಸಿರುವ ಒಂದು ಹೇಳಿಕೆಯಿಂದ ಬಿಗ್ ಟ್ವಿಸ್ಟ್ ಸಿಕ್ಕಂತಾಗಿದೆ.
ಸಿಎಂ ಬದಲಾವಣೆ ವಿಚಾರವಾಗಿ ಆರಂಭದಲ್ಲಿ ಸಿದ್ದರಾಮಯ್ಯ ನಾನೇ ಸಿಎಂ ಎನ್ನುತ್ತಿದ್ದರು. ಬಳಿಕ ಡಿಕೆ ಶಿವಕುಮಾರ್ ಬಣ ಹೈಕಮಾಂಡ್ ಮೂಲಕ ಒತ್ತಡ ತಂದ ಬಳಿಕ ಹೈಕಮಾಂಡ್ ಹೇಳುವವರೆಗೆ ಎಂದು ಹೇಳಿಕೆ ನೀಡುತ್ತಿದ್ದರು. ಈ ಮೂಲಕ ಕೊಂಚ ಮೆತ್ತಗಾಗಿರುವ ಸೂಚನೆ ನೀಡಿದ್ದರು.
ಆದರೆ ನಿನ್ನೆ ರಾತ್ರಿ ತಮ್ಮ ಬೆಂಬಲಿಗರೊಂದಿಗೆ ಡಿನ್ನರ್ ಮೀಟ್ ಮಾಡಿದ ಬಳಿಕ ಸಿದ್ದರಾಮಯ್ಯ ದಿಡೀರ್ ಬದಲಾಗಿದ್ದಾರೆ. ಡಿನ್ನರ್ ಮೀಟ್ ನಲ್ಲಿ ಬೆಂಬಲಿಗರು ಯಾವುದೇ ಕಾರಣಕ್ಕೆ ಸಿಎಂ ಸ್ಥಾನ ಬಿಟ್ಟುಕೊಡಬೇಡಿ. ನಿಮ್ಮ ಜೊತೆಗೆ ನಾವಿದ್ದೇವೆ ಎಂದ ಬಳಿಕ ಸಿದ್ದರಾಮಯ್ಯ ವರಸೆ ಬದಲಾಗಿದೆ.
ಇಂದು ಸದನದಲ್ಲೇ ಅಧಿಕೃತವಾಗಿ ಮತ್ತು ಸ್ಪಷ್ಟವಾಗಿ ನಾನೇ ಐದು ವರ್ಷವೂ ಸಿಎಂ ಎಂದು ಘೋಷಿಸಿದ್ದಾರೆ. ಅವರ ಈ ಘೋಷಣೆಯಿಂದ ಈಗ ಸಿಎಂ ಕುರ್ಚಿ ಕಿತ್ತಾಟಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸಿದ್ದರಾಮಯ್ಯ ಈ ಘೋಷಣೆ ಸಹಜವಾಗಿಯೇ ಡಿಕೆಶಿ ಬಣದ ಅಸಮಾಧಾನಕ್ಕೆ ಕಾರಣವಾಗಲಿದೆ. ಅತ್ತ ಸಿದ್ದು ಹೈಕಮಾಂಡ್ ಗೂ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಹೀಗಾಗಿ ಈಗ ಅವರನ್ನು ಬದಲಿಸುವುದು ಅಷ್ಟು ಸುಲಭವಲ್ಲ ಎನ್ನುವುದು ಹೈಕಮಾಂಡ್ ಗೂ ಮನದಟ್ಟಾಗಲಿದೆ. ಅತ್ತ ಇಷ್ಟು ದಿನವೂ ಪಕ್ಷಕ್ಕೆ ನಿಷ್ಠೆಯಿಂದಿದ್ದ ಡಿಕೆಶಿ ಕೂಡಾ ಈಗ ಸುಮ್ಮನಿರಲ್ಲ. ಹೀಗಾಗಿ ಸಿಎಂ ಇಂದಿನ ಸಂದೇಶ ಕುರ್ಚಿ ಕಿತ್ತಾಟಕ್ಕೆ ದೊಡ್ಡ ಟ್ವಿಸ್ಟ್ ಕೊಟ್ಟಂತಾಗಿದೆ.