ಬೆಳಗಾವಿ: ಚಳಿಗಾಲದ ಅಧಿವೇಶನದಲ್ಲಿ ಈ ಬಾರಿ ಡಿಕೆ ಶಿವಕುಮಾರ್ ಎಂದಿನ ಖದರ್ ತೋರುತ್ತಿಲ್ಲ ಎಂದು ಸ್ವತಃ ವಿಪಕ್ಷ ಬಿಜೆಪಿಯೇ ಕಾಲೆಳೆದಿದೆ. ಡಿಕೆಶಿ ಈ ಬಾರಿ ತಮ್ಮದೇ ಲೋಕದಲ್ಲಿದ್ದಾರೆ.
ಕಾಂಗ್ರೆಸ್ ನಲ್ಲಿ ಅಧಿಕಾರ ಹಂಚಿಕೆ ಕಿತ್ತಾಟ ನಡೆಯುತ್ತಿದೆ. ಈ ನಡುವೆ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಬಣದ ನಡುವೆ ಮೀಟಿಂಗ್ ಗಳು, ಔತಣಕೂಟಗಳು ನಡೆಯುತ್ತಿವೆ. ಬೆಳಗಾವಿ ಅಧಿವೇಶನ ನಡೆಯುತ್ತಿರುವಾಗಲೂ ಇದು ಮುಂದುವರಿದಿದೆ.
ಎಷ್ಟರ ಮಟ್ಟಿಗೆ ಎಂದರೆ ಡಿಕೆ ಶಿವಕುಮಾರ್ ಈ ಬಾರಿ ಅಧಿವೇಶನದಲ್ಲಿ ಕೊಂಚ ಸೈಲೆಂಟ್ ಆದಂತೆ ಕಾಣುತ್ತಿದ್ದಾರೆ. ಮೊನ್ನೆ ಸಿಎಂ ಯಾರು ಎಂಬ ಬಗ್ಗೆ ವಿಪಕ್ಷಗಳು ಸಿದ್ದರಾಮಯ್ಯನವರನ್ನು ಕೆಣಕಿದಾಗಲೂ ಸುಮ್ಮನಿದ್ದರು.
ಇದು ಇಷ್ಟಕ್ಕೇ ನಿಲ್ಲಲಿಲ್ಲ. ನಿನ್ನೆಯೂ ಸದನದಲ್ಲಿ ನಡು ನಡುವೆ ತಮ್ಮ ಆಪ್ತ ಶಾಸಕರೊಂದಿಗೇ ಡಿಕೆಶಿ ಮಾತುಕತೆ ನಡೆಸುತ್ತಾ ಕಾಲ ಕಳೆಯುವುದು ಕಂಡುಬಂದಿದೆ. ವಿಶೇಷವಾಗಿ ತಮ್ಮ ಆಪ್ತ ಬಳಗಲದಲ್ಲಿ ಗುರುತಿಸಿಕೊಂಡಿರುವ ನಯನಾ ಮೋಟಮ್ಮ, ಬಾಲಕೃಷ್ಣ ಮಾಗಡಿ, ಸಿಪಿ ಯೋಗೇಶ್ವರ್ ಅವರ ಜೊತೆ ಗಹನವಾಗಿ ಮಾತುಕತೆ ನಡೆಸುತ್ತಿದ್ದಾರೆ. ಹೀಗಾಗಿ ಸದನದಲ್ಲೂ ಡಿಕೆಶಿ ಲೆಕ್ಕಾಚಾರವೇ ಬೇರೆಯೇನೋ ಎಂಬ ಅನುಮಾನ ಮೂಡಿಸುವಂತಿತ್ತು.