ಬೆಂಗಳೂರು: ರಾಜ್ಯದಲ್ಲಿ ಅಧಿಕಾರ ಹಂಚಿಕೆ ವಿಚಾರ ಚರ್ಚೆಯಲ್ಲಿರುವಾಗಲೇ ಡಿಕೆ ಶಿವಕುಮಾರ್ ಬಣಕ್ಕೆ ಠಕ್ಕರ್ ಕೊಡಲು ಸಿದ್ದರಾಮಯ್ಯ ಬಣ ಭರ್ಜರಿ ಪ್ಲ್ಯಾನ್ ಮಾಡಿದೆ.
ಡಿಕೆ ಶಿವಕುಮಾರ್ ವಿರುದ್ಧ ಸಿದ್ದರಾಮಯ್ಯಗಿರುವ ಪ್ರಬಲ ಅಸ್ತ್ರವೆಂದರೆ ಅಹಿಂದ ನಾಯಕತ್ವ. ಅಹಿಂದ ನಾಯಕರ ಬೆಂಬಲವೇ ಸಿದ್ದರಾಮಯ್ಯಗೆ ಪ್ಲಸ್ ಪಾಯಿಂಟ್. ಇದನ್ನೇ ವರಿಷ್ಠರ ಮುಂದೆಯೂ ಅವರು ಪ್ರಯೋಗಿಸುತ್ತಿದ್ದಾರೆ.
ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಿದ್ದರಾಮಯ್ಯ ಬೆಂಬಲಿಗರು ತಮ್ಮ ನಾಯಕನಿಗಾಗಿ ಬೃಹತ್ ಅಹಿಂದ ಸಮಾವೇಶ ನಡೆಸಲು ಮುಂದಾಗಿದ್ದಾರೆ. ಜನವರಿ ಕೊನೆಯ ವಾರದಲ್ಲಿ ಅಹಿಂದ ಸಂಘಟನೆಗಳ ಒಕ್ಕೂಟ ಸಿದ್ದರಾಮಯ್ಯಗಾಗಿ ಸಮಾವೇಶ ನಡೆಸಲಿದೆ.
ಈ ಸಮಾವೇಶದಲ್ಲಿ ಸಿದ್ದರಾಮಯ್ಯ ಅಹಿಂದ ರತ್ನ ಎಂದು ಬಿರುದು ನೀಡಲು ಪ್ಲ್ಯಾನ್ ನಡೆಸಿದೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ಈ ಹಿಂದೆ ಹಾಸನದಲ್ಲಿ ಸಿದ್ದರಾಮಯ್ಯ ಉತ್ಸವ ಎಂದು ಮಾಡಲು ಹೊರಟಾಗ ಹೈಕಮಾಂಡ್ ಇದನ್ನು ಪಕ್ಷದ ಸಮಾವೇಶವಾಗಿ ಮಾಡಬೇಕು ಎಂದು ಸೂಚಿಸಿತ್ತು. ಈಗಲೂ ಅನಗತ್ಯ ಸಂಘರ್ಷ ತಪ್ಪಿಸಲು ಹೈಕಮಾಂಡ್ ಮಧ್ಯಪ್ರವೇಶಿಸುತ್ತಾ ನೋಡಬೇಕಿದೆ.