ಬೆಳಗಾವಿ: ನಿನ್ನೆಯ ಕಲಾಪ ವೀಕ್ಷಿಸಿದ ಅನೇಕರಿಗೆ ಕಾಡಿದ್ದು ಒಂದೇ ಪ್ರಶ್ನೆ. ಸಿಎಂ ಸಿದ್ದರಾಮಯ್ಯಗೆ ಡಿಕೆ ಶಿವಕುಮಾರ್ ಹೀಗ್ಯಾಕೆ ಮಾಡಿದ್ರು ಎಂಬುದು.
ರಾಜ್ಯದಲ್ಲಿ ಅಧಿಕಾರ ಹಂಚಿಕೆ ವಿಚಾರ ತೆರೆಮರೆಯಲ್ಲಿ ಚರ್ಚೆಯಾಗುತ್ತಿದೆ. ಈ ನಡುವೆ ಬೆಳಗಾವಿ ಅಧಿವೇಶನದಲ್ಲಿ ನಿನ್ನೆ ವಿಪಕ್ಷಗಳು ಸಿಎಂ ಸಿದ್ದರಾಮಯ್ಯನವರ ಕಾಲೆಳೆದಿದೆ. ನೀವೇ ಮುಖ್ಯಮಂತ್ರಿಯಾಗಿರುತ್ತೀರಿ ಎಂದು ಗ್ಯಾರಂಟಿ ಇದೆಯಾ ಎಂದು ಪ್ರಶ್ನೆ ಮಾಡಿವೆ.
ವಿಪಕ್ಷಗಳ ಟಾಂಗ್ ಗೆ ಸಿಎಂ ಸಿದ್ದರಾಮಯ್ಯ ಒಬ್ಬರೇ ನಿಂತು ವೀರಾವೇಷದಿಂದ ಉತ್ತರಿಸಿದ್ದಾರೆ. ಹೈಕಮಾಂಡ್ ಹೇಳುವವರೆಗೂ ನಾನೇ ಮುಖ್ಯಮಂತ್ರಿ. ಈಗಲೂ ನಾನೇನೂ ಮುಂದೆಯೂ ನಾನೇ ಮುಖ್ಯಮಂತ್ರಿ ಎಂದು ಮೂರು ಮೂರು ಸಲ ಹೇಳಿದ್ದಾರೆ.
ಇಷ್ಟೆಲ್ಲಾ ಆಗುವಾಗ ಡಿಕೆ ಶಿವಕುಮಾರ್ ಕೂಡಾ ಸದನದಲ್ಲಿದ್ದರು. ಆದರೆ ವಿಪಕ್ಷಗಳ ಸಿಎಂ ಕುರ್ಚಿ ಕದನದ ಬಾಣಕ್ಕೆ ಡಿಕೆಶಿ ಒಂದೇ ಒಂದು ಉತ್ತರ ಕೊಡಲಿಲ್ಲ. ತನಗೂ ಅದಕ್ಕೂ ಸಂಬಂಧವೇ ಇಲ್ಲ ಎಂಬಂತೆ ಇದ್ದರು. ಇದನ್ನು ನೋಡಿ ಡಿಕೆಶಿ ಹೀಗೇಕೆ ಮಾಡಿದರು ಎಂಬ ಪ್ರಶ್ನೆ ಅನೇಕರಿಗೆ ಮೂಡಿದ್ದು ನಿಜ. ಆದರೆ ಬಾಯಿ ಬಿಟ್ಟರೆ ಮತ್ತೆ ವಿವಾದಗಳಾಗುತ್ತವೆ ಎಂಬ ಕಾರಣಕ್ಕೋ ಏನೋ ಡಿಕೆಶಿ ಮಾತ್ರ ತಮ್ಮದೇ ಲೋಕದಲ್ಲಿದ್ದರು.