ಮೈಸೂರು: ಡಿಕೆ ಶಿವಕುಮಾರ್ ಸಿಎಂ ಆಗುವ ಬಗ್ಗೆ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಸ್ಪೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ಅವರ ಹೇಳಿಕೆ ಡಿಕೆಶಿ ಬಣದ ಕಣ್ಣು ಕೆಂಪಗಾಗಿಸುವುದಂತೂ ಸತ್ಯ.
ಹೈಕಮಾಂಡ್ ಸಲಹೆ ಮೇರೆಗೆ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸಿ ಎಲ್ಲವೂ ಸರಿಯಿದೆ ಎಂದು ಸಾರಿದ ಬೆನ್ನಲ್ಲೇ ಈಗ ಒಬ್ಬೊಬ್ಬ ನಾಯಕರ ಮಾತು ಮತ್ತೆ ಕುರ್ಚಿ ಕದನ ಗರಿಗೆದರುವ ಲಕ್ಷಣ ಕಾಣುತ್ತಿದೆ.
ಇದೀಗ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿಎಂ ಬದಲಾವಣೆ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಡಿಕೆ ಶಿವಕುಮಾರ್ ಹೈಕಮಾಂಡ್ ಬಳಿ ತಮಗೆ ಅವಕಾಶ ಕೊಡಿ ಎಂದು ಕೇಳಿದ್ದರು. ಆದರೆ ಹೈಕಮಾಂಡ್ ಸದ್ಯಕ್ಕೆ ನಾಯಕತ್ವ ಬದಲಾವಣೆ ಇಲ್ಲ ಎಂದಿದೆ. ಐದು ವರ್ಷವೂ ಸಿದ್ದರಾಮಯ್ಯನವರೇ ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂಬ ವಿಶ್ವಾಸ ನಮಗಿದೆ.
ನಮ್ಮಲ್ಲಿ ಯಾವುದೇ ಕಿತ್ತಾಟವಿಲ್ಲ. ನಾಯಕತ್ವ ಬದಲಾವಣೆಯಿಲ್ಲ ಎಂದು ಹೈಕಮಾಂಡ್ ಹೇಳಿದೆ. ಇದೆಲ್ಲಾ ವಿಪಕ್ಷದವರು ಹುಟ್ಟುಹಾಕುತ್ತಿರುವ ವದಂತಿಗಳು ಎಂದು ಯತೀಂದ್ರ ಹೇಳಿಕೆ ನೀಡಿದ್ದಾರೆ. ಇದೀಗ ಡಿಕೆಶಿ ಬಣದ ಕಣ್ಣು ಕೆಂಪಗಾಗಿಸಬಹುದು.