Publish Date: Wed, 15 May 2019 (15:04 IST)
Updated Date: Wed, 15 May 2019 (15:06 IST)
ಮತ್ತೊಮ್ಮೆ ಸಿದ್ದರಾಮಯ್ಯರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದಕ್ಕಾಗಿ ಅವರ ಚೇಲಾಗಳು ಸೋ… ಅಂತ ಸೋಬಾನೆ ಪದ ಹಾಡುತ್ತಿದ್ದಾರಂತೆ.
ಸಿದ್ದರಾಮಯ್ಯರ ವಿರುದ್ಧ ಬಿಜೆಪಿ ಹಿರಿಯ ಮುಖಂಡ ವಾಗ್ದಾಳಿ ಮುಂದುವರಿಸಿದ್ದಾರೆ. ಕಾಂಗ್ರೆಸ್ ನ ಎಲ್ಲ ಮುಖಂಡರು ನರಸತ್ತವರು ಎಂದು ಪುನರುಚ್ಛರಿಸಿದ ಅವರು, ಸಿಎಂ ಆಗೋ ಸನ್ನಿವೇಶ ಈಗಿಲ್ಲ. ಆದರೂ ಸಿದ್ದರಾಮಯ್ಯರ ಚೇಲಾಗಳು ಸೋಬಾನೆ ಹಾಡುತ್ತಿದ್ದಾರೆ ಎಂದು ಟೀಕೆ ಮಾಡಿದ್ದಾರೆ ಕೆ.ಎಸ್.ಈಶ್ವರಪ್ಪ.
ಹುಬ್ಬಳ್ಳಿಯಲ್ಲಿ ಮಾತನಾಡಿರುವ ಕೆ.ಎಸ್.ಈಶ್ವರಪ್ಪ, ಎಲ್ಲ ಗೊತ್ತಿದ್ರೂ ಮಲ್ಲಿಕಾರ್ಜುನ ಖರ್ಗೆ ಬಾಯಿ ಮುಚ್ಚಿಕೊಂಡಿದ್ದಾರೆ. ಖರ್ಗೆಯವರು ಸೈಲೆಂಟ್ ಯಾಕಿದ್ದಾರೆ ಎಂದು ಪ್ರಶ್ನಿಸಿದ್ರು.
ಮೇ 23 ರ ನಂತರ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರರನ್ನು ಹುಡುಕಬೇಕಾದ ಪರಿಸ್ಥಿತಿ ಎದುರಾಗುತ್ತದೆ ಎಂದು ಟೀಕೆ ಮಾಡಿದ್ದಾರೆ.