Publish Date: Tue, 14 May 2019 (17:04 IST)
Updated Date: Tue, 14 May 2019 (17:06 IST)
ಬಿ.ಎಸ್.ಯಡಿಯೂರಪ್ಪ ಒಂದು ವರ್ಷದಿಂದ ಸಿಎಂ ಆಗೋಕೆ ಪ್ರಯತ್ನ ನಡೆಸಿದ್ದಾರೆ. ಆದರೆ ಸದನದಲ್ಲಿ ಬಹುಮತ ತೋರಿಸಲು ಸಾಧ್ಯವಾಗಿಲ್ಲ. ಹೀಗಂತ ಮಾಜಿ ಸಿಎಂ ವ್ಯಂಗ್ಯವಾಡಿದ್ದಾರೆ.
ಇವರೆಲ್ಲ ಮರ್ಯಾದೆಯಿಂದ ಮನೆಯಲ್ಲಿ ಇರಬೇಕು ಅಲ್ವಾ, ನಾವೆಲ್ಲಾ ಇಲ್ವಾ. ಚೌಕಿದಾರ್ ಪಾರ್ಟಿಯಿಂದ ನಮ್ಮ ಶಾಸಕರಿಗೆ 20 ಕೋಟಿ ಆಮಿಷ ಒಡ್ಡಲಾಗುತ್ತಿದೆ. ಪದೇ ಪದೇ ಸಿಎಂ ಆಗ್ತಿನಿ ಆಗ್ತಿನಿ ಅಂತಾರೆ ಯಡಿಯೂರಪ್ಪ.
ವಿರೋಧ ಪಕ್ಷದ ಕೆಲಸ ಮಾಡೋದನ್ನು ಬಿ. ಎಸ್. ಯಡಿಯೂರಪ್ಪ ಬಿಟ್ಟಿದ್ದಾರೆ. ಹೀಗಂತ ಮಾಜಿ ಸಿಎಂ ಸಿದ್ದರಾಮಯ್ಯ ದೂರಿದ್ದಾರೆ.
ಯಡಿಯೂರಪ್ಪ ಅವರ ಕನಸಲ್ಲಿ ನಿತ್ಯ ವಿಧಾನಸೌಧ, ಮೂರನೇ ಮಹಡಿ, ಸಿಎಂ ಕುರ್ಚಿ ಕಾಣುತ್ತಿದೆ. ಈಗಾಗಲೇ ಮೈತ್ರಿ ಸರಕಾರಕ್ಕೆ ಯಡಿಯೂರಪ್ಪ 10-12 ಬಾರಿ ಗಡವು ನೀಡಿದ್ದಾರೆ. ಮಾನ, ಮಾರ್ಯಾದೆ ಲಜ್ಜೆಗೆಟ್ಟವರ ಪಕ್ಷ ಬಿಜೆಪಿ ಅಂತ
ಕುಂದಗೋಳದಲ್ಲಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ರು.