Publish Date: Tue, 14 May 2019 (16:59 IST)
Updated Date: Tue, 14 May 2019 (17:01 IST)
ಬೆಳಗಾವಿಯಿಂದ ನಿನ್ನೆ ತಡರಾತ್ರಿ ಬೆಂಗಳೂರಿಗೆ ವಾಪಸು ಆದ ರಮೇಶ್ ಜಾರಕಿಹೊಳಿ ಮತ್ತೆ ಒಬ್ಬಂಟಿ ಆಗಿದ್ದಾರೆ ಎನ್ನೋ ಮಾತು ಕೇಳಿಬರುತ್ತಿವೆ.
ಮನೆ ಬಿಟ್ಟು ಹೊರಬಾರದ ರಮೇಶ್ ಜಾರಕಿಹೊಳಿಯನ್ನು ಭೇಟಿ ಮಾಡಲು ಯಾವುದೇ ಶಾಸಕರು ಆಗಮಿಸಿಲ್ಲ.
ಕೊನೆಯ ವಾರ ಮನವೊಲಿಸಲು ಬಂದಿದ್ದ ಸಂಸದ ಬಿ.ವಿ ನಾಯಕ್ ಗೆ ಈಗಾಗಲೇ ಒಂದು ಹೆಜ್ಜೆ ಮುಂದಿಟ್ಟಿದ್ದೇನೆ. ನನ್ನ ನಿರ್ಧಾರ ಬದಲಾಗಲ್ಲ ಅಂತ ಹೇಳಿ ಕಳಿಸಿದ್ರು. ಅದೇ ಗುಂಗಿನಲ್ಲಿಯೇ ಇದ್ದಾರೆ ರಮೇಶ್ ಜಾರಕಿಹೊಳಿ. ಬೆಂಗಳೂರಿಗೆ ಬಂದ ರಮೇಶ್ ಗೆ ಮತ್ತೊಂದು ಶಾಕ್ ಕಾದಿದೆ.
ನಾಗೇಂದ್ರ ಸೇರಿದಂತೆ ಯಾವುದೇ ಶಾಸಕರು ಭೇಟಿಗೆ ಬರಲಿಲ್ಲ. ಹೀಗಾಗಿ ಸರ್ಕಾರಿ ನಿವಾಸದಲ್ಲಿ ಒಬ್ಬಂಟಿಯಾಗಿ ಕೂತಿದ್ದಾರೆ ಶಾಸಕ ರಮೇಶ್.
ಕೈ ಪಕ್ಷಕ್ಕೆ ಕೈ ಕೊಡುವ ಶಾಸಕನ ಮೇಲೆ ಬಿಜೆಪಿ ನಾಯಕರಿಗೂ ನಂಬಿಕೆ ಇಲ್ಲದಂತಾಗಿದೆ ಎನ್ನಲಾಗಿದೆ. ರಮೇಶ್ ಜತೆ ಮ್ಯಾಜಿಕ್ ನಂಬರ್ ಇಲ್ಲ ಅನ್ನೋ ಮಾತುಗಳನ್ನು ಈಗಾಗಲೇ ಬಿಜೆಪಿ ನಾಯಕರೇ ಮಾತನಾಡುತ್ತಿದ್ದಾರೆ. ಇತ್ತ ಕೈ ಪಕ್ಷದಲ್ಲೂ ಬೆಲೆ ಇಲ್ಲ, ಅತ್ತ ಬಿಜೆಪಿಗೆ ಹೋಗುವ ಮೊದಲೇ ವೀಕ್ ಲೀಡರ್ ಅಂತ ಬಿಜೆಪಿ ವಲಯದಲ್ಲಿ ಚರ್ಚೆ ಶುರುವಾಗಿದೆ.
ಹೀಗಾಗಿ ರಮೇಶ್ ಜಾರಕಿಹೊಳಿ ಇಂದ ಮತ್ತೊಂದು ಪ್ಲಾಪ್ ಷೋ ನಡೆದಿದ್ದು, ಒಬ್ಬಂಟಿಯಾಗಿದ್ದಾರೆ ರಮೇಶ್ ಜಾರಕಿಹೊಳಿ, ಅವರ ಪಟಾಕಿ ಮತ್ತೆ ಠುಸ್ ಆಗಿದೆ.