Select Your Language

Notifications

webdunia
webdunia
webdunia
webdunia

ಸಿಎಂ, ಡಿಕೆಶಿ ಕೊಠಡಿ ಮೇಲೆ ಐಟಿ ರೇಡ್

ಸಿಎಂ, ಡಿಕೆಶಿ ಕೊಠಡಿ ಮೇಲೆ ಐಟಿ ರೇಡ್
ಹುಬ್ಬಳ್ಳಿ , ಮಂಗಳವಾರ, 14 ಮೇ 2019 (13:11 IST)
ಲೋಕಸಭೆ ಚುನಾವಣೆ ಸಂದರ್ಭದಲ್ಲಿ ನಡೆದ ರೈಡ್ ಮಾದರಿಯಲ್ಲೇ ಕುಂದಗೋಳ ಉಪಚುನಾವಣೆಯಲ್ಲೂ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಸಚಿವ ಡಿ.ಕೆ. ಶಿವಕುಮಾರ್ ಸೇರಿದಂತೆ ಕಾಂಗ್ರೆಸ್, ಜೆಡಿಎಸ್ ನಾಯಕರು ಉಳಿದುಕೊಂಡಿದ್ದ ಕೊಠಡಿಗಳನ್ನು ಪರಿಶೀಲಿಸಿದ್ದಾರೆ.

webdunia
ಲೋಕಸಭಾ ಚುನಾವಣೆ ವೇಳೆ ಮಂಡ್ಯ, ಮೈಸೂರು, ಹಾಸನ, ತುಮಕೂರು, ಶಿವಮೊಗ್ಗ ಸೇರಿದಂತೆ ಸಾಕಷ್ಟು ಜಾಗಗಳಲ್ಲಿ ತಪಾಸಣೆ ನಡೆಸಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರನ್ನು ಟಾರ್ಗೆಟ್ ಮಾಡಿದ್ದರು. ಕೆಲವು ಕಡೆ ಹಣ, ಆಸ್ತಿ ಸಿಗದಿದ್ದರೂ ಕೆಲವು ಕಡೆ ಒಳ್ಳೆ ಕುಳಗಳೇ ಬಲೆಗೆ ಬಿದ್ದಿದ್ದವು. ಆದರೆ ಈ ಬಾರಿ ತೆರಿಗೆ ಅಧಿಕಾರಿಗಳು ಏನೂ ಸಿಗದೇ ಬರಿಗೈಲಿ ವಾಪಸ್ ಹೋಗಿದ್ದಾರೆ.

ಹುಬ್ಬಳ್ಳಿಯಲ್ಲಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ತಂಗಿರುವ ಗೋಕುಲ ರಸ್ತೆಯ ಡಿನಿಸನ್ಸ್ ಹೊಟೇಲ್ ಹಾಗೂ ಸಚಿವ ಡಿ.ಕೆ. ಶಿವಕುಮಾರ್ ಅವರು ತಂಗಿರುವ ಕಾಟನ್ ಕೌಂಟಿ ಕ್ಲಬ್ ಕೊಠಡಿಗಳ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಇನ್ನು ಸಚಿವ ಜಮೀರ್ ಅಹ್ಮದ್ ಖಾನ್, ಆರ್.ವಿ. ದೇಶಪಾಂಡೆ, ಎಂಎಲ್‌ಸಿ ನಾಸೀರ್ ಅಹ್ಮದ್, ಸಂತೋಷ್ ಲಾಡ್, ಎಂ.ಟಿ.ಬಿ ನಾಗರಾಜ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ವಾಸ್ತವ್ಯ ಹೂಡಿರುವ ಕೊಠಡಿಗಳನ್ನೂ ತಲಾಶ್ ನಡೆಸಿದ್ದಾರೆ.

ಹೊಟೇಲ್ ದಾಖಲೆಗಳನ್ನು ವಶಕ್ಕೆ ಪಡೆದರು. ಗೋವಾ ಮತ್ತು ಬೆಳಗಾವಿ ಭಾಗದ ಐಟಿ ಅಧಿಕಾರಿಗಳ ತಂಡ ದಾಳಿ ಮಾಡಿದ್ದು, ವಾರ್ಡ್‌ರೋಬ್, ಟೇಬಲ್, ಕಾಟ್‌ಗಳನ್ನೂ ಬಿಡದೆ ಪರಿಶೀಲನೆ ಮಾಡಿದ್ದಾರೆ. ಈ ದಾಳಿಯಲ್ಲಿ ಅಧಿಕಾರಿಗಳ ಕೈಗೆ ಏನಾದ್ರು ಸಿಕ್ಕಿದ್ಯಾ ಅನ್ನೋ ಮಾಹಿತಿ ಇನ್ನಷ್ಟೇ ಸಿಗಬೇಕಿದೆ. ಒಟ್ಟಾರೆ, ಲೋಕಸಭೆ ಚುನಾವಣೆ ವೇಳೆ ಶುರುವಾದ ಐಟಿ ದಾಳಿ ಮಿನಿ ಸಮರದಲ್ಲೂ ಮುಂದುವರಿದಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಎಟಿಎಂ ನಲ್ಲಿ ಹೊಡೆದಾಟ; ಕಾರಣ ಏನು?