Select Your Language

Notifications

webdunia
webdunia
webdunia
webdunia

ಡಿಕೆಶಿಗೆ ಬೈ ಎಲೆಕ್ಷನ್ ಉಸ್ತುವಾರಿ ನೀಡಿದ್ದೇಕೆ? ಕೈ ಪಡೆಯ ಮಾಸ್ಟರ್ ಪ್ಲಾನ್ ಏನು?

ಡಿಕೆಶಿಗೆ ಬೈ ಎಲೆಕ್ಷನ್ ಉಸ್ತುವಾರಿ ನೀಡಿದ್ದೇಕೆ? ಕೈ ಪಡೆಯ ಮಾಸ್ಟರ್ ಪ್ಲಾನ್ ಏನು?
ಧಾರವಾಡ , ಸೋಮವಾರ, 13 ಮೇ 2019 (12:55 IST)
ಸಚಿವ ಡಿ.ಕೆ. ಶಿವಕುಮಾರ್ ಗೆ ಕುಂದಗೋಳ ಬೈ ಎಲೆಕ್ಷನ್  ಉಸ್ತುವಾರಿ ನೀಡಿದ್ದೇಕೆ ?  ಹೀಗೊಂದು ಪ್ರಶ್ನೆ ಸ್ವತಃ ಕಾಂಗ್ರೆಸ್ ಮುಖಂಡರಿಂದಲೂ ಆಂತರಿಕವಾಗಿ ಕೇಳಿಬರುತ್ತಿತ್ತು. ಅದಕ್ಕೆ ಈಗ ಉತ್ತರ ಸಿಕ್ಕಿದಂತಾಗಿದೆ.

ಡಿಕೆಶಿಗೆ ಬೈ ಎಲೆಕ್ಷನ್ ಉಸ್ತುವಾರಿ ನೀಡಿದ್ದರ ಹಿಂದಿದೆ ಕಾಂಗ್ರೆಸ್ ಮಾಸ್ಟರ್ ಪ್ಲಾನ್ ಅಡಗಿದೆ. ಬೈ ಎಲೆಕ್ಷನ್ ಬಳಿಕ ಡಿಕೆ ಶಿವಕುಮಾರಗೆ ಹುಬ್ಬಳ್ಳಿ- ಧಾರವಾಡ ಉಸ್ತುವಾರಿ ನೀಡಲಾಗುತ್ತದಂತೆ. ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಡಿಕೆಶಿ ಒಲಿಯಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಸಧ್ಯ ಆರ್. ವಿ. ದೇಶಪಾಂಡೆ ಧಾರವಾಡ ಉಸ್ತುವಾರಿ ಸಚಿವರಾಗಿದ್ದಾರೆ. ಬೈ ಎಲೆಕ್ಷನ್ ಬಳಿಕ ಉಸ್ತುವಾರಿ ಯಾರಿಗೆ ನೀಡಬೇಕು ಅನ್ನೋ ಗೊಂದಲ ಕಾಂಗ್ರೆಸ್ ನಲ್ಲಿದೆ. ಆರ್. ವಿ. ದೇಶಪಾಂಡೆಗೆ ಧಾರವಾಡ ಉಸ್ತುವಾರಿಯಾಗಿ ಮುಂದುವರೆಯೋ ಬಯಕೆ ಇದೆ. ಆದ್ರೆ ಅವರು ಕಾರ್ಯಕರ್ತರ, ಮುಖಂಡರ ಕೈಗೆ ಸಿಗಲ್ಲ ಅನ್ನೋ ಮಾತಿದೆ.
ಹಾಗಾಗಿ ದೇಶಪಾಂಡೆಗೆ‌ ಧಾರವಾಡದ ಉಸ್ತುವಾರಿಯಾಗಿ ಮುಂದುವರೆಯೋದು ಡೌಟ್ ಎನ್ನಲಾಗ್ತಿದೆ.

 ಹುಬ್ಬಳ್ಳಿ - ಧಾರವಾಡದಲ್ಲಿ ಪಕ್ಷವನ್ನ ಬಲ ಪಡಿಸಬೇಕಿದೆ. ಅದು ಡಿ.ಕೆ. ಶಿವಕುಮಾರರಿಂದ ಮಾತ್ರ ಸಾಧ್ಯ ಅನ್ನೋದು ಕೈ ಮುಖಂಡರಿಗೆ ಗೊತ್ತಿದೆ. ಜೊತೆಗೆ ಸ್ಥಳೀಯವಾಗಿ ಡಿಕೆಶಿಗೆ ಜಿಲ್ಲಾ ಉಸ್ತುವಾರಿ ನೀಡಬೇಕು ಅನ್ನೋ ಕೂಗು ಕೂಡ ಜೋರಾಗ್ತಿದೆ. ನಿನ್ನೆ ಕೆ. ಸಿ. ವೇಣುಗೋಪಾಲ ಮುಂದೆ ಡಿಕೆಶಿಗೆ ಜಿಲ್ಲಾ ಉಸ್ತುವಾರಿ ನೀಡಬೇಕು ಅಂತಾ ಸ್ಥಳೀಯ ಮುಖಂಡರು ಒತ್ತಾಯಿಸಿದ್ದಾರೆ.

ಆ ಭಾಗದ ನಾಯಕರ ವಿರೋಧದ ನಡುವೆಯೂ ಡಿಕೆಶಿಗೆ ಕುಂದಗೋಳ ಬೈ ಎಲೆಕ್ಷನ್  ಉಸ್ತುವಾರಿ ನೀಡಿದ್ದೇ ಈ ಕಾರಣಕ್ಕೆ.  ಡಿಕೆಶಿ ತಂತ್ರಗಾರಿಕೆಯಿಂದ ಚುನಾವಣೆ ಗೆಲ್ಲೋದು ಕೈ ಪಡೆ ಗುರಿ. ಗೆದ್ದರೆ ಡಿಕೆಶಿಗೆ ಧಾರವಾಡ ಜಿಲ್ಲಾ ಉಸ್ತುವಾರಿ ಹೊಣೆ ನೀಡೋದು. ಇದು ವೇಣುಗೋಪಾಲ ಮಾಸ್ಟರ್ ಪ್ಲಾನ್ ಎನ್ನಲಾಗಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಗಂಡ ಇಲ್ಲದ ಹೆಣ್ಣು, ಪತ್ನಿ ಕಳೆದುಕೊಂಡ ಗಂಡು ಸೇರಿದ್ದೇ ಮೈತ್ರಿ ಸರಕಾರವಂತೆ!