Publish Date: Wed, 15 May 2019 (14:32 IST)
Updated Date: Wed, 15 May 2019 (14:35 IST)
ಕುರುಬರು ದಡ್ಡರು ಅಂತ ಬಹಳ ಜನ ತಿಳಿದುಕೊಂಡಿದ್ದಾರೆ. ಅದೇ ಕುರುಬರು, ದಲಿತರು ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸುವ ಮೂಲಕ ಜಾಣರು ಎಂದು ತೋರಿಸಿದ್ದಾರೆ. ಹೀಗಂತ ಬಿಜೆಪಿ ಹಿರಿಯ ಮುಖಂಡ ಟೀಕೆ ಮಾಡಿದ್ದಾರೆ.
ಚಿಂಚೋಳಿಯಲ್ಲಿ ಮಾತನಾಡಿದ ಎಂದು ಬಿಜೆಪಿ ಹಿರಿಯ ಮುಖಂಡ ಈಶ್ವರಪ್ಪ, ಸಮ್ಮಿಶ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಅವರಿಗೆ
ನಾನೇ ಸಿಎಂ ಅಂತಾ ಹುಚ್ಚು ಹಿಡಿದಿದೆ. ಆ ಹುಚ್ಚಿಗೆ ಭೈರತಿ ಬಸವರಾಜು, ಸೋಮಶೇಖರ್ ಮೊದಲಾದವರು ಗಾಳಿ ಹಾಕ್ತಾರೆ. ಸಿದ್ದರಾಮಯ್ಯ ನಾನೇ ಸಿಎಂ ಅಂದಾಗ ಬಾಯಿಮುಚ್ಕೊಂಡು ಕುತ್ಕೋ ಎಂದು ಖರ್ಗೆ ಹೇಳುತ್ತಾರೆ ಅಂತಾ ಅಂದುಕೊಂಡಿದ್ದೆ. ಈಶ್ವರ ನೀನು ಪರಮೇಶ್ವರ ಆಗಲು ಸಾಧ್ಯವಿಲ್ಲ ಎಂದು ಡಾ. ಪರಮೇಶ್ವರ್ ನನಗೆ ಹೇಳಿದ್ದಾರೆ.
ನೀವು ಪರಮೇಶ್ವರ ಆಗಿದ್ದರೆ ಮೂರನೇ ಕಣ್ಣು ತರೆದು ಸಿದ್ದರಾಮಯ್ಯ ಅವರನ್ನು ಭಸ್ಮ ಮಾಡಿಬಿಡುತ್ತಿದ್ದೀರಿ. ಆದರೆ ಅಧಿಕಾರದ ಆಸೆಯಿಂದ ಅದನ್ನು ನೀವು ಮಾಡಲಿಲ್ಲಾ ಹಾಗೂ ಸಿದ್ದರಾಮಯ್ಯ ಅವರಿಗೆ ಕಡಿವಾಣ ಹಾಕಲಿಲ್ಲಾ ಎಂದು ಲೇವಡಿ ಮಾಡಿದರು.