Publish Date: Thu, 26 Dec 2019 (16:24 IST)
Updated Date: Thu, 26 Dec 2019 (16:26 IST)
ಮಹಾರಾಷ್ಟ್ರ ಏಕೀಕರಣ ಸಮೀತಿಯ ನಾಯಕರನ್ನು ಗಡಿಯಲ್ಲಿ ನಿಲ್ಲಿಸಿ ಗುಂಡು ಹೊಡೆಯಿರಿ. ಅದಕ್ಕೆ ನನ್ನ ಬೆಂಬಲ ಇದೆ.
ಹೀಗಂತ ಕರ್ನಾಟಕ ನವನಿರ್ಮಾಣ ಸೇನೆಯ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ ಫರ್ಮಾನು ಹೊರಡಿಸಿದ್ದಾರೆ.
ಕಳೆದ ಆರವತ್ತು ನಾಲ್ಕು ವರ್ಷದಿಂದ ಬೆಳಗಾವಿ ಗಡಿಯಲ್ಲಿ ಸರ್ಕಾರಿ ಆಸ್ತಿಯನ್ನು ಹಾಳು ಮಾಡಿ ಕನ್ನಡಿಗರಿಗೆ ಮುಳ್ಳಿನಂತೆ ಚುಚ್ಚುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮೀತಿಯ ನಾಯಕರನ್ನು ಗಡಿಯಲ್ಲಿ ನಿಲ್ಲಿಸಿ ಗುಂಡು ಹೊಡೆಯಿರಿ. ಅದಕ್ಕೆ ನನ್ನ ಬೆಂಬಲ ಇದೆ ಎಂದಿದ್ದಾರೆ.
ಬೆಳಗಾವಿಯ ಕೇಂದ್ರ ಸಚಿವ ಸುರೇಶ್ ಅಂಗಡಿ, ಸರ್ಕಾರಿ ಆಸ್ತಿ ಪಾಸ್ತಿ ಹಾಳು ಮಾಡುವವರನ್ನು ಗುಂಡಿಕ್ಕಿ ಎಂದು ಹೇಳಿದ್ದಾರೆ.
ಕಳೆದ ಅರವತ್ತು ನಾಲ್ಕು ವರ್ಷದಿಂದ ಗಡಿಯಲ್ಲಿ ಸರ್ಕಾರಿ ಆಸ್ತಿ ಪಾಸ್ತಿ ಹಾಳು ಮಾಡಿ ರಕ್ಕಸಕೊಪ್ಪ ಜಲಾಶಯದಲ್ಲಿ ವಿಷ ಬೆರೆಸಿ ಗಡಿನಾಡು ಕನ್ನಡಿಗರನ್ನು ಸಾಮೂಹಿಕವಾಗಿ ಹತ್ಯೆ ಮಾಡಲು ಸಂಚು ರೂಪಿಸಿದ್ದ ಎಂಈಎಸ್ ನಾಯಕರಿಗೆ ಗುಂಡು ಹಾರಿಸಿ ಎಂದು ಹೇಳಿಕೆ ನೀಡುವ ತಾಕತ್ತು ಸುರೇಶ ಅಂಗಡಿ ಅವರಿಗೆ ಇದೆಯಾ? ಎಂದು ಸವಾಲು ಹಾಕಿರುವ ಭೀಮಾಶಂಕರ ಪಾಟೀಲ ಎಂ ಈ ಎಸ್ ನಾಯಕರನ್ನು ಗಡಿಯಲ್ಲಿ ನಿಲ್ಲಿಸಿ ಗುಂಡು ಹಾರಿಸಬೇಕೆಂದು ಹೇಳಿದ್ದಾರೆ.