ಮಾಜಿ ಶಾಸಕನ ಮನೆಯಲ್ಲಿ ಆಸ್ತಿಗಾಗಿ ಕಿತ್ತಾಟ; ಮಾರಣಾಂತಿಕ ಹಲ್ಲೆ

ಮಂಗಳವಾರ, 21 ಮೇ 2019 (10:50 IST)
ಆಸ್ತಿಗಾಗಿ ಎಂಇಎಸ್ ನ ಮಾಜಿ ಶಾಸಕ ದಿವಂಗತ ಸಂಭಾಜಿ ಪಾಟೀಲ ಅವರ ಎರಡನೆಯ ಪತ್ನಿ ಬೆಂಬಲಿಗರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.

ಸಂಭಾಜಿ ಪಾಟೀಲ ಸೊಸೆ ಸಾಧನಾ ಹಾಗೂ ಕುಟುಂಬ ಸದಸ್ಯರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಬೆಳಗಾವಿ ತಾಲೂಕಿನ ಬೆನಕನಹಳ್ಳಿಯಲ್ಲಿರುವ ಫಾರ್ಮ್ ಹೌಸ್ ನಲ್ಲಿ ನಡೆದಿದೆ. ಬೆಳಿಗ್ಗೆ ಎಂಟು ಜನರ ತಂಡದೊಂದಿಗೆ  ಸಂಭಾಜಿ ‌ಪಾಟೀಲ ಎರಡನೇ ಪತ್ನಿ ಉಜ್ವಲಾ ಪಾಟೀಲ ಅವರು ಏಕಾ ಏಕಿ ಫಾರ್ಮಹೌಸಗೆ ನುಗ್ಗಿ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ.

ಫಾರ್ಮಹೌಸನಲ್ಲಿ ಸಾಧನಾ ಸಂಬಂಧಿ ರೂಪಾಲಿ ಜುಂಜವಾಡಕರ ಎಂಬುವವರ ಕೈಗೆ ಚೂರಿಯಿಂದ ಇರಿದು ಪರಾರಿಯಾಗಿದ್ದಾರೆ. ಜೊತೆಗೆ ಸಾಧನಾ ಹಾಗೂ ಆಕೆಯ ಸಹೋದರಿ ರಂಜಿತಾ ಮೇಲೆ ದೈಹಿಕ ಹಲ್ಲೆ  ಮಾಡಿದ್ದಾರೆ.

ವಿಷಯ ತಿಳಿದ ಬೆಳಗಾವಿ ಗ್ರಾಮೀಣ ಪೋಲಿಸರು ಸ್ಥಳಕ್ಕೆ ಭೇಟಿ ನಿಡಿ ಪ್ರರಣವನ್ನ ದಾಖಲಿಸಿಕೊಂಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ ಫಲಿತಾಂಶಕ್ಕೂ ಮೊದಲೇ ಇವಿಎಂ ಬಗ್ಗೆ ಅಪಸ್ವರ ಶುರು ಮಾಡಿದ ವಿರೋಧ ಪಕ್ಷಗಳು