Select Your Language

Notifications

webdunia
webdunia
webdunia
webdunia

ಫಲಿತಾಂಶಕ್ಕೂ ಮೊದಲೇ ಇವಿಎಂ ಬಗ್ಗೆ ಅಪಸ್ವರ ಶುರು ಮಾಡಿದ ವಿರೋಧ ಪಕ್ಷಗಳು

ಫಲಿತಾಂಶಕ್ಕೂ ಮೊದಲೇ ಇವಿಎಂ ಬಗ್ಗೆ ಅಪಸ್ವರ ಶುರು ಮಾಡಿದ ವಿರೋಧ ಪಕ್ಷಗಳು
ನವದೆಹಲಿ , ಮಂಗಳವಾರ, 21 ಮೇ 2019 (10:47 IST)
ನವದೆಹಲಿ: ಲೋಕಸಭಾ ಚುನಾವಣೆ 2019 ರ ಫಲಿತಾಂಶಕ್ಕೆ ಇನ್ನೂ ಎರಡು ದಿನ ಬಾಕಿಯಿದ್ದು, ಈಗಾಗಲೇ ಎಕ್ಸಿಟ್ ಪೋಲ್ ವರದಿಗಳು ಬಂದಿವೆ. ಅದರ ಪ್ರಕಾರ ಆಡಳಿತಾರೂಢ ಎನ್ ಡಿಎ ಮತ್ತೆ ಅಧಿಕಾರಕ್ಕೆ ಬರುವುದು ಖಚಿತವಾಗಿದೆ.


ಆದರೆ ನಿಜವಾದ ಫಲಿತಾಂಶ ಇನ್ನೂ ಪ್ರಕಟವಾಗಿಲ್ಲ. ಹಾಗಿದ್ದರೂ ಅದಕ್ಕೂ ಮೊದಲೇ ಆರ್ ಜೆಡಿ, ಟಿಎಂಸಿ ಸೇರಿದಂತೆ ವಿರೋಧ ಪಕ್ಷಗಳ ವಿವಿಧ ನಾಯಕರು ಇವಿಎಂ ಬಗ್ಗೆ ಅಪಸ್ವರ ಶುರು ಮಾಡಿದ್ದಾರೆ.

ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಅಂತೂ ಮತಯಂತ್ರಗಳನ್ನು ರಹಸ್ಯವಾಗಿ ಸಾಗಣೆ ಮಾಡಲು ಶುರು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಇಂದು ವಿರೋಧ ಪಕ್ಷಗಳ ವಿವಿಧ ನಾಯಕರು ಚುನಾವಣಾ ಆಯೋಗವನ್ನು ಭೇಟಿ ಮಾಡಿ ಮತಯಂತ್ರಗಳ ಸುರಕ್ಷತೆ ತಮ್ಮ ಕಳವಳ ತೋಡಿಕೊಳ್ಳಲಿದ್ದಾರೆ.

ಎಕ್ಸಿಟ್ ಪೋಲ್ ಫಲಿತಾಂಶ ಬಂದ ಬೆನ್ನಲ್ಲೇ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಇವಿಎಂ ಯಂತ್ರಗಳನ್ನು ತಿರುಚಲು ಈ ಫಲಿತಾಂಶ ಒಂದು ಗೇಮ್ ಪ್ಲ್ಯಾನ್ ಎಂದು ಆರೋಪಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

3 ದಿನದ ಹಿಂದೆ ಹುಟ್ಟಿದ ಆಡಿನ ಮರಿ ಹಾಲು ನೀಡುತ್ತಿದೆಯಂತೆ. ಇದಕ್ಕೆ ಕಾರಣವೇನು ಗೊತ್ತಾ?