3 ದಿನದ ಹಿಂದೆ ಹುಟ್ಟಿದ ಆಡಿನ ಮರಿ ಹಾಲು ನೀಡುತ್ತಿದೆಯಂತೆ. ಇದಕ್ಕೆ ಕಾರಣವೇನು ಗೊತ್ತಾ?

ಮಂಗಳವಾರ, 21 ಮೇ 2019 (10:34 IST)
ಬಾಗಲಕೋಟೆ : ಯಾವುದೇ ಪ್ರಾಣಿ ಪ್ರಸವದ ನಂತರ ಹಾಲು ಕೊಡುವುದು ಸಾಮಾನ್ಯ ವಿಚಾರ. ಆದರೆ ಇಲ್ಲೊಂದು ಆಡಿನ ಮರಿ ಹುಟ್ಟಿದ 3 ದಿನಕ್ಕೆ ಹಾಲು ನೀಡುತ್ತಿದೆ.
ಹೌದು. ಬಾಗಲಕೋಟೆ ತಾಲೂಕಿನ ತುಳಸೀಗೆರೆಯ ಹನುಮಂತ ದಾಸನ್ನವರ ಅವರ ಮನೆಯಲ್ಲಿ ವಾರದ ಹಿಂದೆ ಆಡೊಂದು ಮರಿಗೆ ಜನ್ಮ ನೀಡಿತ್ತು. ಆದರೆ ಹಾಲು ಕುಡಿಯುವ  ಈ ಎಳೆ ಆಡಿನ ಮರಿ ಕೇವಲ 3 ದಿನಗಳಲ್ಲೇ ಹಾಲು ನೀಡಲಾರಂಭಿಸಿದೆ.


ಇದು ಗ್ರಾಮದ ಜನರಲ್ಲಿ ಆಶ್ಚರ್ಯವನ್ನುಂಟು ಮಾಡಿದೆ. ಅಲ್ಲದೇ ಹಾರ್ಮೋನುಗಳ ವ್ಯತ್ಯಾಸದ ಕಾರಣ ಹೀಗಾಗಿರಬಹುದು ಎಂದು ವೈದ್ಯಾಧಿಕಾರಿಗಳು, ಅಭಿಪ್ರಾಯ ಪಟ್ಟಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಇವಿಎಂ ಸರಿಯಿಲ್ಲ ಎಂದವರಿಗೆ ತೇಜಸ್ವಿ ಸೂರ್ಯ ಹಾಕಿದ ಸವಾಲೇನು ಗೊತ್ತಾ?