ಮಗುವಿನ ಬಾಲ್ಯದ ನೆನಪಿಗಾಗಿ ಎದೆ ಹಾಲಿನಿಂದ ಉಂಗುರ ಮಾಡಿಸಲು ಮುಂದಾದ ತಾಯಿ

ಸೋಮವಾರ, 20 ಮೇ 2019 (06:57 IST)
ಕ್ಯಾಲಿಫೋರ್ನಿಯಾ : ತಮ್ಮ ಮಗುವಿಗಾಗಿ ತಂದೆ ತಾಯಿ ಏನು ಬೇಕಾದರೂ ಮಾಡಲು ಸಿದ್ಧರಾಗಿರುತ್ತಾರೆ. ಅದೇರೀತಿ ಇದೀಗ ಮಹಿಳೆಯೊಬ್ಬಳು ತಮ್ಮ ಮಗುವಿಗೆ ಬಾಲ್ಯದ ನೆನಪಿಗಾಗಿ ಎದೆ ಹಾಲಿನಿಂದ ಉಂಗುರ ಮಾಡಿಸಲು ಮುಂದಾಗಿದ್ದಾಳೆ.
ಹೌದು. ನಿಕೋಲಸ್ ಹೆಸರಿನ ಮಹಿಳೆ ಈ ಕಾರ್ಯಕ್ಕೆ ಮುಂದಾಗದ್ದು, ಈಕೆ ಎದೆ ಹಾಲಿನಿಂದ ಉಂಗುರ ಮಾಡಿಸಲು ಎದೆ ಹಾಲನ್ನು ಸಂಗ್ರಹಿಸಿಟ್ಟಿದ್ದಾಳಂತೆ. ಅದಕ್ಕಾಗಿ ಮೂರು ವಿನ್ಯಾಸಗಳನ್ನು ಆರಿಸಿದ್ದು, ಅದರಲ್ಲಿ ಒಂದು ವಿನ್ಯಾಸದ ಉಂಗುರವನ್ನು ಶೀಘ್ರವೇ ಮಾಡಿಸಿಕೊಳ್ತೇನೆಂದು ನಿಕೋಲಸ್ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾಳೆ.


ಈ ಮಹಿಳೆ ಹೇಳಿದ್ದು ಆಶ್ಚರ್ಯವೆನಿಸಿದರೂ ಕ್ಯಾಲಿಫೋರ್ನಿಯಾದ ಮಾರುಕಟ್ಟೆಯೊಂದರಲ್ಲಿ  ಎದೆ ಹಾಲಿನಿಂದ ಆಭರಣ ತಯಾರಿಸಲಾಗುತ್ತದೆ.ಅಷ್ಟೇ ಅಲ್ಲದೇ  ಭಾರತದಲ್ಲೂ ಕೆಲವು ಕಡೆ ಈ ಆಭರಣ ತಯಾರಿ ನಡೆಯುತ್ತದೆಯಂತೆ. ಆದರೆ ಅದರ ಬಗ್ಗೆ ಯಾರಿಗೂ ಮಾಹಿತಿ ತಿಳಿದಿಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ವೋಟ್ ಹಾಕಿದ ಜಾಧವ್ ಹೇಳಿದ್ದೇನು?