ಚಿಲ್ಲರೆ ಹಣಕ್ಕಾಗಿ ಅಮಾಯಕರ ಮೇಲೆ ನಾಲ್ಕು ಮಂದಿ ಗುಂಡು ಹಾರಿಸಿದ್ರು!

ಗುರುವಾರ, 10 ಅಕ್ಟೋಬರ್ 2019 (18:29 IST)
ಆ ಪುಂಡರು ಪಾನ್ ಶಾಪ್ ವೊಂದರಲ್ಲಿ ಗುಟ್ಕಾ ತೆಗೆದುಕೊಂಡು ತಿಂದಿದ್ದಾರೆ. ಚಿಲ್ಲರೆ 5 ರೂಪಾಯಿ ಗುಟ್ಕಾ ದುಡ್ಡು ಕೇಳಿದ ಅಂಗಡಿಯವನಿಗೆ ಹಾಗೂ ಆತನನ್ನ ಬಿಡಿಸಲು ಬಂದೋನ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದಾರೆ.

ಗುಟ್ಕಾ ತಿಂದು  ಹಣ ಕೊಡದೇ ಹೋಗುತ್ತಿದ್ದವರನ್ನ ತಡೆದು ಪಾನ್ ಶಾಪ್ ಮಾಲೀಕ ಚೋಟು ಅಗರವಾಲ್ ಹಣ ಕೇಳಿದ್ದಾನೆ. ಹಣ ಕೇಳಿದ್ದಕ್ಕೆ ಗರಂ ಆದ ನಾಲ್ವರ ಗುಂಪು ಏಕಾಏಕಿಯಾಗಿ ಹಲ್ಲೆ ನಡೆಸಿದೆ. ಬಿಡಿಸಲು ಹೋದ ವ್ಯಕ್ತಿ ಮೇಲೆಯೂ ಗುಂಡು ಹಾರಿಸಿ ವಿಕೃತಿ ಮೆರೆದಿದ್ದಾರೆ.

ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಚಿಲ್ಲರೆ ಹಣ ಕೊಡದೇ ಗುಂಡು ಹಾರಿಸಿ ಪರಾರಿಯಾಗಿರೋ ಆರೋಪಿಗಳಾದ ಟಿಕನ್ನಾ, ದೀಪಕ, ಫೌಜ್ದಾರ, ಪೋಟಾ ಎಂಬುವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ವಿಸ್ಕಿ ಕುಡಿದು ಹಾಳಾಗಿದ್ದೆ ಎಂದ ಸಿನಿಮಾ ನಟಿ