Select Your Language

Notifications

webdunia
webdunia
webdunia
webdunia

ಹೊಳೆನರಸೀಪುರದ ಸರ್ಕಾರಿ ಐಬಿಯಲ್ಲಿ ತಹಶೀಲ್ದಾರ್ ಗಳಿಂದ ಗುಂಡು ತುಂಡು ಪಾರ್ಟಿ

ಹೊಳೆನರಸೀಪುರದ ಸರ್ಕಾರಿ ಐಬಿಯಲ್ಲಿ ತಹಶೀಲ್ದಾರ್ ಗಳಿಂದ ಗುಂಡು ತುಂಡು ಪಾರ್ಟಿ
ಹಾಸನ , ಶನಿವಾರ, 5 ಅಕ್ಟೋಬರ್ 2019 (13:35 IST)
ಹಾಸನ : ತಹಶೀಲ್ದಾರ್ ಗಳೆಲ್ಲಾ ಸೇರಿಕೊಂಡು ಸರ್ಕಾರಿ ಐಬಿಯಲ್ಲಿ ಗುಂಡು ತುಂಡು ಪಾರ್ಟಿ ಮಾಡಿದ ಘಟನೆ  ಹಾಸನದ ಜಿಲ್ಲೆಯ ಹೊಳೆನರಸೀಪುರದಲ್ಲಿ ನಡೆದಿದೆ.




ಶುಕ್ರವಾರ ತಡರಾತ್ರಿ ಈ ಪಾರ್ಟಿ ನಡೆದಿದ್ದು, ಮಹಿಳಾ ತಹಶೀಲ್ದಾರ್ ಗಳು ಸೇರಿದಂತೆ ಜಿಲ್ಲೆಯ ಆರು ತಾಲೂಕಿನ ತಹಶೀಲ್ದಾರ್ ಗಳು ಇದರಲ್ಲಿ ಭಾಗಿಯಾಗಿದ್ದಾರೆ. ಹೊಳೆನರಸೀಪುರ ತಾಲೂಕಿನ ತಹಶೀಲ್ದಾರ್ ಶ್ರೀನಿವಾಸ್, ಸಕಲೇಶಪುರ ತಹಶೀಲ್ದಾರ್ ರಕ್ಷಿತ್, ಹಾಸನ ತಹಶೀಲ್ದಾರ್ ಮೇನಕಾಗಾಂಧಿ ಸೇರಿ ಒಟ್ಟು ಏಳು ಜನ ತಹಶೀಲ್ದಾರ್ ಗಳು ಸೇರಿಕೊಂಡು ಐಬಿಯಲ್ಲಿ ಗುಂಡು ತುಂಡು ಪಾರ್ಟಿ ಮಾಡಿದ್ದಾರೆ.


ಇದನ್ನು ಬಿಜೆಪಿ ಕಾರ್ಯಕರ್ತ ನಾಗೇಶ್ ಎಂಬುವವರು ವಿಡಿಯೋ ಮಾಡಿದ ಕಾರಣ ತಹಶೀಲ್ದಾರ್ ಗಳ ಆದೇಶದ ಮೇರೆಗೆ  ಪೊಲೀಸರು ನಾಗೇಶ್ ಮೇಲೆ ಹಲ್ಲೆ ಮಾಡಿ ಬಂಧಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.


Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಬಿಎಸ್ ವೈಗೆ ಜ್ಞಾನ ಇದ್ಯಾ ಇಲ್ವಾ ಅಂತಾ ಗೊತ್ತಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದೇಕೆ?