Publish Date: Thu, 01 Aug 2019 (19:09 IST)
Updated Date: Thu, 01 Aug 2019 (19:11 IST)
ಏರಪೋರ್ಟ್ ನಲ್ಲಿ ಸಜೀವ ಗುಂಡುಗಳು ಪತ್ತೆಯಾಗಿರೋ ಘಟನೆ ನಡೆದಿದೆ.
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ನಾಲ್ಕು ಸಜೀವ ಗುಂಡುಗಳು ಕೇಂದ್ರೀಯ ಕೈಗಾರಿಕಾ ಭದ್ರತಾ ದಳ ಸಿಬ್ಬಂದಿ ವಶಕ್ಕೆ ತೆಗೆದುಕೊಂಡಿದ್ದಾರೆ.
ಸಂಜೀವ್ ಶೆಟ್ಟಿ ಎಂಬುವರು ಮುಂಬೈಗೆ ಪ್ರಯಾಣ ಬೆಳೆಸುತ್ತಿದ್ದರು. ವಿಮಾನ ನಿಲ್ದಾಣದಲ್ಲಿ ಲಗೇಜ್ ಚಕ್ಕಿಂಗ್ ಸಂದರ್ಭದಲ್ಲಿ ಗುಂಡು ಪತ್ತೆಯಾಗಿವೆ. ಸಂಜೀವ್ ಶೆಟ್ಟಿಗೆ ಸೇರಿದ ಬ್ಯಾಗಿನಲ್ಲಿ 32 ಎಂಎಂ ನ ನಾಲ್ಕು ಗುಂಡುಗಳು ಸಿಕ್ಕಿವೆ. ಸಿಐಎಸ್ ಎಫ್ ಅಧಿಕಾರಿಗಳು ಬಜ್ಪೆ ಠಾಣೆಗೆ ಗುಂಡುಗಳನ್ನು ಹಸ್ತಾಂತರ ಮಾಡಿದ್ದಾರೆ.
ಲೈಸನ್ಸ್ ಹೊಂದಿರೋ ಮದ್ದು ಗುಂಡುಗಳು ಇವಾಗಿವೆ. ಆದರೆ ಲೈಸನ್ಸ್ ತರಲು ಮರೆತು ಬಂದಿದ್ದಾರೆ. ಈ ಕುರಿತು ಕೇಸ್ ದಾಖಲಾಗಿದೆ ಅಂತ ಪೊಲೀಸರು ಹೇಳಿದ್ದಾರೆ.