Publish Date: Fri, 16 Aug 2019 (18:19 IST)
Updated Date: Fri, 16 Aug 2019 (18:21 IST)
ಗುಂಡು ಹಾರಿಸಿಕೊಂಡು ಒಂದೇ ಕುಟುಂಬದ ಐವರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯಲ್ಲಿ ಘಟನೆ ನಡೆದಿದೆ.
ಇಬ್ಬರು ಮಹಿಳೆಯರು, ಒಬ್ಬ ಬಾಲಕ, ಇಬ್ಬರು ಪುರುಷರು ಆತ್ಮಹತ್ಯೆ ಮಾಡಕೊಂಡಿದ್ದಾರೆ ಎನ್ನಲಾಗುತ್ತಿದೆ.
ರಾತ್ರಿ ಮೈಸೂರಿನಿಂದ ಬಂದಿದ್ದ ಕುಟುಂಬದವರು ಗುಂಡ್ಲುಪೇಟೆ ನಂದಿ ಲಾಡ್ಜ್ ನಲ್ಲಿ ವಾಸ್ಯವ್ಯ ಹೂಡಿದ್ದರು.
ಓಂಪ್ರಕಾಶ್ ಹೆಸರಲ್ಲಿ ರೂಂ ಬುಕ್ ಮಾಡಿದ್ದರು.
ಬೆಳಗಿನ ಜಾವ ಪಟ್ಟಣದ ಹೊರವಲಯಕ್ಕೆ ಬಂದು ಸಾಮೂಹಿಕವಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ಗುಂಡ್ಲುಪೇಟೆ ಪೊಲೀಸರು ಭೇಟಿ ನೀಡಿದ್ದಾರೆ.
ಮೈಸೂರಿನ ದಟ್ಟಗಳ್ಳಿ ನಿವಾಸಿಗಳಾದ ಓಂ ಪ್ರಕಾಶ್, ಪತ್ನಿ ನಿಖಿತ, ಮಗ ಆರ್ಯ ಕೃಷ್ಣ, ತಾಯಿ ಹೇಮಲತಾ, ತಂದೆ ನಾಗರಾಜು ಭಟ್ಟಚಾರ್ಯ ಸಾವನ್ನಪ್ಪಿದವರಾಗಿದ್ದಾರೆ.