Select Your Language

Notifications

webdunia
webdunia
webdunia
webdunia

ಸಿಟ್ಟಾದ ಕಾಡಾನೆ ತುಳಿದು ಕೊಂದದ್ದು ಯಾರನ್ನು ಗೊತ್ತಾ?

webdunia
ಬುಧವಾರ, 14 ಆಗಸ್ಟ್ 2019 (19:55 IST)
ಕಾಡಿನಿಂದ ನಾಡಿಗೆ ಬಂದ ಕಾಡಾನೆಯೊಂದು ವ್ಯಕ್ತಿಯೊಬ್ಬರನ್ನು ತುಳಿದು ಸಾಯಿಸಿರೋ ಭೀಕರ ಘಟನೆ ನಡೆದಿದೆ.

ಕಾಡಿನಿಂದ ನಾಡಿಗೆ ಬಂದ ಕಾಡಾನೆಗಳನ್ನು ಅರಣ್ಯ ಸಿಬ್ಬಂದಿ ಕಾಡಿಗೆ ಅಟ್ಟುವ ಸಂದರ್ಭದಲ್ಲಿ ವ್ಯಕ್ತಿಯ ಮೇಲೆ ದಾಳಿ ನಡೆಸಿ ತುಳಿದು ಸಾಯಿಸಿರುವಂತಹ ಘಟನೆ ನಡೆದಿದೆ.

ಬೆಂಗಳೂರು ಹೊರವಲಯ ಹೊಸಕೋಟೆಯ ತಿರುವರಂಗ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕರ್ನಾಟಕ- ತಮಿಳುನಾಡಿನ ಗಡಿ ಭಾಗದ ಸುತ್ತಮುತ್ತಲಿನ ಗ್ರಾಮಗಳ ಕಡೆ  ಓಡಾಡಿಕೊಂಡಿದ್ದ ಆನೆಗಳು ಕರ್ನಾಟಕಕ್ಕೆ ಎಂಟ್ರಿ ಕೊಟ್ಟು ಸರ್ಜಾಪುರ, ಮುಗಳೂರು ಮಾರ್ಗವಾಗಿ ಕಾಡಿಗೆ ಅಟ್ಟುವ ಸಂದರ್ಭದಲ್ಲಿ ತಿರುವರಂಗ ಗ್ರಾಮದ ಬಳಿ  ಆನೆಗಳನ್ನು ನೋಡಲು ಬಂದ ಅಣ್ಣಯ್ಯಪ್ಪ(40) ಎಂಬಾತನ ಮೇಲೆ ದಾಳಿ ನಡೆಸಿ ತುಳಿದು ಸಾಯಿಸಿದೆ.

ಇನ್ನು ಈ ಎರಡು ಆನೆಗಳು ತಮಿಳುನಾಡಿನ ಅರಣ್ಯದ ಆನೆಗಳಾಗಿವೆ. ಈಗಾಗಲೇ ತಮಿಳುನಾಡಿನ ಏಳು ಜನರನ್ನು ಬಲಿ ತೆಗೆದುಕೊಂಡಿದ್ದು, ಈ ಆನೆಗಳನ್ನು ಅರಣ್ಯ ಸಿಬ್ಬಂದಿ ಕಾಡಿಗೆ ಓಡಿಸಲು ಸತತ ಪ್ರಯತ್ನ ಮಾಡುತ್ತಿದ್ದಾರೆ.  Share this Story:

Follow Webdunia Hindi

ಮುಂದಿನ ಸುದ್ದಿ

ಜಲಪ್ರಳಯದ ಮಧ್ಯೆ ಸರಳವಾಗಿ 73ನೇ ಸ್ವಾತಂತ್ರ್ಯ ದಿನಾಚರಣೆ