Publish Date: Mon, 29 Jul 2019 (09:52 IST)
Updated Date: Mon, 29 Jul 2019 (09:54 IST)
ಬೆಂಗಳೂರು : ಇಂದು ನೂರಕ್ಕೆ ನೂರು ಪರ್ಸೆಂಟ್ ಬಹುಮತ ಸಾಬೀತು ಪಡಿಸ್ತೇವೆ ಎಂದು ಬಿಜೆಪಿ ಶಾಸಕ ಆರ್.ಅಶೋಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನರು ಜೆಡಿಎಸ್ ಗೆ 37 ಸ್ಥಾನ ಕೊಟ್ಟು ಥರ್ಡ್ ಪ್ಲೇಸ್ ನಲ್ಲಿ ಇಟ್ಟಿದ್ದರು. ಆದರೆ ಥರ್ಡ್ ಪ್ಲೇಸ್ ಬಂದವರು ಫಸ್ಟ್ ಪ್ಲೇಸ್‍ಗೆ ಬಂದರು. ಇದು ರಾಜ್ಯದ ದುರಂತ. ಈ ದುರಂತ ಹೋಗಿ, ಒಳ್ಳೆಯ ದಿನಗಳು ಬಂದಿವೆ. ಮತ್ತೆ ಬಿ.ಎಸ್ ಯಡಿಯೂರಪ್ಪ ಸಿಎಂ ಆಗಿದ್ದಾರೆ ಎಂದು ಹೇಳಿದ್ದಾರೆ.
ಹಾಗೇ ರಾಜ್ಯದ ಜನತೆಗೆ ಅಭಿವೃದ್ಧಿ, ಸುಭದ್ರ ಹಾಗೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಡಳಿತ ಕೊಡಬೇಕಿದೆ. ಕೇಂದ್ರದಲ್ಲೂ, ರಾಜ್ಯದಲ್ಲೂ ಬಿಜೆಪಿ ಸರ್ಕಾರ ಇದೆ. ಮೂವತ್ತು ವರ್ಷದ ಬಳಿಕ ಇಂತಹ ಅವಕಾಶ ಬಂದಿದೆ. ಕೇಂದ್ರದ ಯೋಜನೆ, ಅನುದಾನ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಅಲ್ಲದೇ ರಾಜೀನಾಮೆ ಕೊಟ್ಟವರಿಗೂ ನಮಗೂ ಯಾವ ಸಂಬಂಧವಿಲ್ಲ. ನಾವು ಯಾರೂ ಅವರನ್ನು ನೋಡಿಲ್ಲ. ಮಾತಾಡಿಸಿಯೂ ಇಲ್ಲ ಎಂದು ಬಿಜೆಪಿ ಮುಖಂಡ ಆರ್.ಅಶೋಕ್ ಸ್ಪಷ್ಟವಾಗಿ ಹೇಳಿದ್ದಾರೆ.