Select Your Language

Notifications

webdunia
webdunia
webdunia
webdunia

ಮುಖದ ಕಾಂತಿ ಹೆಚ್ಚಲು ರಾತ್ರಿ ಮಲಗುವಾಗ ಮನೆಯಲ್ಲೇ ತಯಾರಿಸಿದ ಈ ಕ್ರೀಂ ನ್ನು ಹಚ್ಚಿ

ಮುಖದ ಕಾಂತಿ ಹೆಚ್ಚಲು ರಾತ್ರಿ ಮಲಗುವಾಗ ಮನೆಯಲ್ಲೇ ತಯಾರಿಸಿದ ಈ ಕ್ರೀಂ ನ್ನು ಹಚ್ಚಿ
ಬೆಂಗಳೂರು , ಸೋಮವಾರ, 29 ಜುಲೈ 2019 (08:47 IST)
ಬೆಂಗಳೂರು : ನೋಡಲು ಸುಂದರವಾಗಿದ್ದರೆ ಸಾಲದು. ಮುಖ ಕೂಡ ತುಂಬಾ ಕ್ಲೀನಾಗಿರಬೇಕು. ಇದರಿಂದ ಅಂದ ಇನ್ನಷ್ಟು ಹೆಚ್ಚಾಗುತ್ತದೆ. ಅಂದವಾಗಿ, ಮುಖ ಕಾಂತಿಯುತವಾಗಿರಬೇಕೆಂದರೆ ರಾತ್ರಿ ಮಲಗುವಾಗ ಮನೆಯಲ್ಲೇ ತಯಾರಿಸಿದ ಈ ಕ್ರೀಂನ್ನು ಹಚ್ಚಿ ಮಲಗಿ.




ಒಂದು ಕಂಟೈನರ್ ನಲ್ಲಿ ರೋಸ್ ವಾಟರ್ 1 ಟೀ ಚಮಚ , 1 ಚಿಟಿಕೆ ಕೇಸರಿ ಹಾಕಿ 15 ನಿಮಿಷ ನೆನೆಯಲು ಬಿಡಿ, ನಂತರ ಅದಕ್ಕೆ ಅಲೋವೆರಾಜೆಲ್ 1 ಟೀ ಚಮಚ,  1 ವಿಟಮಿನ್ ಇ ಮಾತ್ರೆ ಹಾಕಿ ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿ. ಗ ಕ್ರೀಂ ರೆಡಿ ಆಗುತ್ತೆ.


ನಂತರ ಮುಖವನ್ನು ಚೆನ್ನಾಗಿ ತೊಳೆದು ಒರೆಸಿಕೊಂಡು ಬಳಿಕ ಈ ಕ್ರೀಂನ್ನು ತೆಗೆದುಕೊಂಡು ಮುಖಕ್ಕೆ ಹಚ್ಚಿಕೊಂಡು ಚೆನ್ನಾಗಿ ಮಸಾಜ್ ಮಾಡಿ ರಾತ್ರಿಯಿಡಿ ಹಾಗೇ ಬಿಟ್ಟು ಬೆಳಿಗ್ಗೆ ವಾಶ್ ಮಾಡಿ. ಇದನ್ನು ಎಲ್ಲಾ ತರಹದ ಸ್ಕೀನ್ ನವರು ಬಳಸಬಹುದು. ಹಾಗೇ ಇದನ್ನು ಬಳಸುವುದರಿಂದ ಮೊಡಲೆಗಳ ಕಲೆ, ನೆರೆಗಳು ಮೂಡುವುದು, ಇನ್ನಿತರ ಸಮಸ್ಯೆಗಳೆಲ್ಲಾ ನಿವಾರಣೆಯಾಗಿ ಮುಖದ ಕಾಂತಿ ಹೆಚ್ಚುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಗಂಡನಿಂದ ದೂರವಾದೋಳು ನನಗೆ ಮದುವೆಯಾಗು ಅಂತಿದ್ದಾಳೆ