Publish Date: Sun, 28 Jul 2019 (06:57 IST)
Updated Date: Sun, 28 Jul 2019 (07:02 IST)
ಬೆಂಗಳೂರು : ನಾನು 37 ವರ್ಷದ ಮಹಿಳೆ. ನನಗೆ ಮದುವೆಯಾಗಿ 12 ವರ್ಷಗಳಾಗಿವೆ. ನನಗೆ ಇಬ್ಬರು ಗಂಡು ಮಕ್ಕಳು. ಮಕ್ಕಳು ಹುಟ್ಟಿದಾಗಿನಿಂದ ನನ್ನ ಗಂಡನ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ ಕಾರಣ ನನ್ನ ಪತಿ ಬೇರೊಬ್ಬ ಅವಿವಾಹಿತ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದಾನೆ. ಆತ ಮನೆಯಲ್ಲಿ ಇರದೆ ಹೆಚ್ಚು ಸಮಯ ಆಕೆಯ ಜೊತೆಗೆ ಕಳೆಯುತ್ತಾನೆ. ನನಗೆ ನನ್ನ ಗಂಡನನ್ನ ಕಳೆದುಕೊಳ್ಳಲು ಇಷ್ಟವಿಲ್ಲ. ನಾನು ಮನೋವೈದ್ಯರನ್ನು ಭೇಟಿ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಈಗ ನಾನು ಏನು ಮಾಡಲಿ?
ಉತ್ತರ : ನೀವು ನಿಮ್ಮ ಭಾವನೆಗಳನ್ನು ನಿಮ್ಮ ಗಂಡನೊಂದಿಗೆ ಚರ್ಚಿಸುವ ಅವಕಾಶಕ್ಕಾಗಿ ಕಾಯಿರಿ. ನೀವು ಸ್ನೇಹಿತರ ಬಳಿ ಚರ್ಚಿಸಿ ಇದಕ್ಕೆ ಸಲಹೆಗಳನ್ನು ಪಡೆಯಬಹುದು. ಹಾಗೇ ನಿಮ್ಮಿಬ್ಬರಿಗೂ ಹತ್ತಿರವಾಗಿರುವ ಯಾರಾದರೂ ವ್ಯಕ್ತಿಯ ಮಧ್ಯಸ್ಥಿಕೆಯಲ್ಲಿ ನಿಮ್ಮ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು.
ಅದಕ್ಕೂ ಮೊದಲು ನಿಮ್ಮ ಗಂಡನ ಬಳಿ ಮಾತುಕತೆ ನಡೆಸುವಾಗ ಏನು ಹೇಳಬೇಕೆಂಬುದನ್ನು ಎಚ್ಚರಿಕೆಯಿಂದ ಯೋಚಿಸಿ. ನಿಮ್ಮ ಸಂಬಂಧ ಹಾಳಾಗದಂತೆ ಹೇಗೆ ಮಾತನಾಡಬೇಕೆಂಬುದನ್ನು ಯೋಚಿಸಿ.