Select Your Language

Notifications

webdunia
webdunia
webdunia
webdunia

ಅಂಥ ಕೆಲಸಕ್ಕೂ ಲಂಚ ಪಡೆದ ಪೊಲೀಸ್ ಕಥೆ ಏನಾಯ್ತು?

ಅಂಥ ಕೆಲಸಕ್ಕೂ ಲಂಚ ಪಡೆದ ಪೊಲೀಸ್ ಕಥೆ ಏನಾಯ್ತು?
ಹೊಸದುರ್ಗ , ಮಂಗಳವಾರ, 13 ಆಗಸ್ಟ್ 2019 (13:55 IST)
ಪೊಲೀಸ್ ಎಂದರೆ ರಕ್ಷಣೆ ಮಾಡೋರು ಅಂತ ಜನರು ತಿಳಿದುಕೊಳ್ಳೋದು ಕಾಮನ್. ಆದರೆ ಇಲ್ಲೊಬ್ಬ ಪೇದೆ ಮಾಡಬಾರದ ಕೆಲಸ ಮಾಡಿದ್ದಾನೆ.

ಹೊಸದುರ್ಗದಲ್ಲಿ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು ಪೊಲೀಸ್ ಪೇದೆಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಅಕ್ರಮ ಮರಳು ಸಾಗಣೆ ಕೇಸ್ ನಲ್ಲಿ ಲಂಚ ಸ್ವೀಕರಿಸುತ್ತಿದ್ದ ಪೇದೆ ಬಲೆಗೆ ಬಿದ್ದಿದ್ದಾನೆ.

ಅಕ್ರಮ ಮರಳು ಸಾಗಣೆ ಮಾಡಲು ಸಹಕಾರ ನೀಡೋದಾಗಿ ಹೇಳಿದ್ದ ಪೇದೆ ಲಂಚಕ್ಕೆ ಬೇಡಿಕೆ ಇಟ್ಟಿದ್ದನು.  

ಮರಳು ಸಾಗಣೆ ಲಾರಿ ಬಿಡುಗಡೆ ಮಾಡೋಕೆ ಹಾಗೂ ಪ್ರಕರಣ ಸಡಿಲುಗೊಳಿಸುವ ಆಮಿಷ ತೋರಿಸಿದ್ದ ಎನ್ನಲಾಗಿದೆ.
ಹೊಸದುರ್ಗ ಠಾಣೆಯ ಪೇದೆ ಅಶೋಕ್ ಎಸಿಬಿ ವಶಕ್ಕೆ ಪಡೆದುಕೊಳ್ಳಲಾಗಿದೆ.

ಎಸಿಬಿ ಡಿವೈಎಸ್ಪಿ ಜಿ.ಮಂಜುನಾಥ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ಮರಳು ಲಾರಿ ಮಾಲೀಕ ಹತ್ತಿಘಟ್ಟ ಗ್ರಾಮದ ನರಸಿಂಹರಾಜುಗೆ ಪೇದೆ ನೆರವು ನೀಡಲು ನರಸಿಂಹರಾಜು ಅಳಿಯ ಕೃಷ್ಣಮೂರ್ತಿ ಬಳಿ 20 ಸಾವಿರ ಲಂಚ ಸ್ವೀಕಾರ ಮಾಡುತ್ತಿದ್ದಾಗ ಪೇದೆ ಬಲೆಗೆ ಬಿದ್ದಿದ್ದಾನೆ.  



Share this Story:

Follow Webdunia kannada

ಮುಂದಿನ ಸುದ್ದಿ

ನಿಖಿಲ್ ಕುಮಾರಸ್ವಾಮಿ ಕಾರ್ಯಕ್ಕೆ ಭಾರೀ ಮೆಚ್ಚುಗೆ ಯಾಕೆ?