Publish Date: Mon, 23 Sep 2019 (16:28 IST)
Updated Date: Mon, 23 Sep 2019 (16:30 IST)
ಎರಡು ತಂಡಗಳ ನಡುವೆ ಗಲಾಟೆ ನಡೆಯುತ್ತಿದ್ದಾಗ ನಡೆದ ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿ ಆರೋಪಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.
ಉಳ್ಳಾಲದಲ್ಲಿ ನಡೆದ ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ.
ಇತ್ತಂಡಗಳ ನಡುವೆ ಆಗಿದ್ದ ಗಲಾಟೆ ಮದ್ಯೆ ಫೈರಿಂಗ್ ನಡೆದಿತ್ತು.
ಎರಡು ತಂಡಗಳ ಹಲವು ಆರೋಪಿಗಳು ಅರೆಸ್ಟ್ ಆಗಿದ್ದಾರೆ.
ಕಾಂಗ್ರೆಸ್ ಮುಖಂಡ ಸುಹೈಲ್ ಕಂದಕ್ ಕಾರಿನಲ್ಲಿದ್ದ ಐದು ಆರೋಪಿಗಳು ಅರೆಸ್ಟ್ ಆಗಿದ್ದಾರೆ.
ಕಿಲಿರಿಯಾನಗರ ನಿವಾಸಿಗಳಾದ 9 ಜನ ಅರೆಸ್ಟ್ ಆಗಿದ್ದಾರೆ. ಉಳ್ಳಾಲ ಪೊಲೀಸರಿಂದ ಬಂಧನವಾಗಿದೆ. ರಾತ್ರಿ 11.30 ಕ್ಕೆ ಎರಡು ತಂಡಗಳ ನಡುವೆ ಜಗಳವಾಗಿ ಗುಂಡಿನ ದಾಳಿಯಾಗಿತ್ತು. ಕಾಂಗ್ರೆಸ್ ಮುಖಂಡ ಸುಹೈಲ್ ತನ್ನ ಲೈಸೆನ್ಸ್ ವೆಪನ್ ನಿಂದ ಗುಂಡು ಹಾರಿಸಿದ್ದ. ಈ ವೇಳೆ ಇರ್ಷಾದ್ ಗೆ ಗುಂಡು ತಗುಲಿತ್ತು. ಜಗಳದಲ್ಲಿ ಸುಹೈಲ್ ಗೂ ಗಾಯವಾಗಿತ್ತು.