Publish Date: Mon, 23 Sep 2019 (16:20 IST)
Updated Date: Mon, 23 Sep 2019 (16:22 IST)
ಬೇರೊಬ್ಬನ ಪತ್ನಿಯಾಗಿ ಈತನ ಪ್ರೇಯಸಿಯಾಗಿದ್ದವಳನ್ನು ಪ್ರಿಯಕರನೇ ಜನರೆದುರು ಅಮಾನವೀಯವಾಗಿ ಕೊಂದಿದ್ದಾನೆ.
ರಾಜಧಾನಿ ಬೆಂಗಳೂರಿನಲ್ಲಿ ಸಿಲಿಂಡರ್ ನಿಂದ ಲವರ್ ಗೆ ಹೊಡೆದು ಪ್ರಿಯಕರ ಕೊಲೆ ಮಾಡಿರೋ ಘಟನೆ ನಡೆದಿದೆ.
ಮದುವೆಯಾಗದಿದ್ರೂ ಒಟ್ಟಿಗೆ ವೆಂಕಟ ಗಿರಿಯಪ್ಪ, ಶಶಿಕಲಾ ಇದ್ರು. ಆದರೆ ಶಶಿಕಲಾ ಬೇರೊಬ್ಬನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಅಂತ ಪ್ರಿಯಕರನಿಗೆ ಸಂಶಯ ಬಂದಿದೆ.
ಹೀಗಾಗಿ ಆಗಾಗ್ಗೆ ಇವರಿಬ್ರೂ ಜಗಳವಾಡುತ್ತಿದ್ದರು. ಆದರೆ ಜಗಳ ವಿಪರೀತ ಆದಾಗ ಸಿಟ್ಟಿನಿಂದ ಪ್ರೇಯಸಿ ಶಶಿಕಲಾಳ ಮೇಲೆ ಸಿಲಿಂಡರ್ ನಿಂದ ಹೊಡೆದು ಬಡಾವಣೆಯ ಜನರೆದುರೇ ಪ್ರಿಯಕರ ವೆಂಕಟ ಗಿರಿಯಪ್ಪ ಕೊಲೆ ಮಾಡಿದ್ದಾನೆ. ಕೆಆರ್ ಪುರಂ ಠಾಣೆಯಲ್ಲಿ ಕೇಸ್ ದಾಖಲಾಗಿದೆ.