Publish Date: Thu, 26 Dec 2019 (16:20 IST)
Updated Date: Thu, 26 Dec 2019 (16:22 IST)
ಜೈಲಿನಲ್ಲಿಯೇ ಭಾರೀ ಹೊಡೆದಾಟ ನಡೆದಿದೆ.
ಕ್ಷುಲ್ಲಕ ಕಾರಣಕ್ಕೆ ವಿಚಾರಣಾಧೀನ ಖೈದಿಗಳಿಬ್ಬರು ಜಗಳ ಮಾಡಿಕೊಂಡು ಕಲ್ಲಿನಿಂದ ಹೊಡೆದಾಡಿಕೊಂಡಿರುವ ಘಟನೆ ನಡೆದಿದೆ. ಹುಬ್ಬಳ್ಳಿಯ ವಿಶ್ವೇಶ್ವರ ನಗರದ ಉಪ ಕಾರಾಗೃಹದಲ್ಲಿ ಘಟನೆ ನಡೆದಿದ್ದು, ಘಟನೆಯಲ್ಲಿ ಓರ್ವ ಗಾಯಗೊಂಡಿದ್ದಾನೆ. ರಾಯನಾಳ ಗ್ರಾಮದ ಸಿದ್ದಪ್ಪ ಗದಿಗೆಪ್ಪ ಕೋಳೂರ (36) ಹಲ್ಲೆಗೀಡಾದವನಾಗಿದ್ದು, ತಾಲೂಕಿನ ಬಮ್ಮಸಮುದ್ರ ಗ್ರಾಮದ ಖಾದರಸಾಬ ಮಹಮ್ಮದ್ ಸಾಬ ಮುನಿಯಾರ್ (40) ಹಲ್ಲೆ ನಡೆಸಿದ ವಿಚಾರಣಾಧೀನ ಖೈದಿಯಾಗಿದ್ದಾನೆ.
ಸ್ನೇಹಿತರಾಗಿದ್ದ ಸಿದ್ದಪ್ಪ ಹಾಗೂ ಖಾದರ್ ಇಬ್ಬರೂ ಮಾತನಾಡುತ್ತ ಕುಳಿತಿದ್ದರು. ನಂತರ 6 ಗಂಟೆಗೆ ಒಳಗೆ ಹೊರಡುವ ವೇಳೆ ಇಬ್ಬರ ನಡುವೆ ಜಗಳ ಸಂಭವಿಸಿ, ನಿನಗ್ಯಾರೂ ಭೇಟಿ ಮಾಡಲು ಬರುವುದಿಲ್ಲ. ನಿನಗೆ ಜೈಲೇ ಗತಿ ಎಂದು ಸಿದ್ದಪ್ಪ ಹೇಳಿದ್ದ, ಈ ಮಾತಿನಿಂದ ಸಿಟ್ಟಾದ ಖಾದರ್, ಪಕ್ಕದಲ್ಲೇ ಇದ್ದ ಕಲ್ಲು ತೆಗೆದುಕೊಂಡು ಸಿದ್ದಪ್ಪನ ತಲೆಗೆ ಹೊಡೆದಿದ್ದಾನೆ. ನಂತರ ಗಾಯಾಳುವನ್ನು ಕಿಮ್ಸ್ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಇನ್ನೂ ಅಶೋಕನಗರ ಠಾಣೆ ಪೋಲಿಸರು ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಿದ್ದಪ್ಪ ಹಾಗೂ ಖಾದರ್ ಇಬ್ಬರೂ ಕೊಲೆ ಆರೋಪಿಗಳಾಗಿದ್ದು, ಸಿದ್ದಪ್ಪ 2015 ರಲ್ಲಿ, ಖಾದರ್ 2017 ರಲ್ಲಿ ಸಬ್ ಜೈಲಿಗೆ ದಾಖಲಾಗಿದ್ದಾರೆ.
,