Select Your Language

Notifications

webdunia
webdunia
webdunia
webdunia

ಪ್ರಧಾನಿ ಮೋದಿಯವರಿಂದ ಸರಣಿ ಟ್ವೀಟ್

ಪ್ರಧಾನಿ ಮೋದಿಯವರಿಂದ ಸರಣಿ ಟ್ವೀಟ್
bangalore , ಗುರುವಾರ, 17 ಮಾರ್ಚ್ 2022 (20:33 IST)
ಭಾರತದಲ್ಲಿ ದೇಶೀಯವಾಗಿ ತಯಾರಾದ (ಸ್ವದೇಶಿ) ಲಸಿಕೆಗಳು ಹಲವು ಇವೆ.  ಮೊದಲು ಎರಡೇ ಲಸಿಕೆಗಳನ್ನು ಬಳಸಲಾಗುತ್ತಿದ್ದರೂ, ಬಳಿಕ ವಿವಿಧ ಲಸಿಕೆಗಳ ಮೌಲ್ಯಮಾಪನ ಮಾಡಿ ಅವುಗಳ ಬಳಕೆಗೂ ಅನುಮೋದನೆ ನೀಡಲಾಗಿದೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆಇಂದಿನಿಂದ ದೇಶದಲ್ಲಿ ಮತ್ತೊಂದು ಹಂತದ ಕೊರೊನಾ ಲಸಿಕೆ ನೀಡಿಕೆ ಅಭಿಯಾನ ಶುರುವಾಗಿದೆ. 12-14ವರ್ಷದವರಿಗೆ ಕೊರೊನಾ ಲಸಿಕೆ ನೀಡಲಾಗುತ್ತಿದೆ. ಈ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸರಣಿ ಟ್ವೀಟ್​ ಮಾಡಿ, ಕೊರೊನಾ ವಿರುದ್ಧ ದೇಶ ಹೋರಾಡುತ್ತಿರುವ ರೀತಿ ಮತ್ತು ಅದಕ್ಕೆ ಜನರು ನೀಡುತ್ತಿರುವ ಸಹಕಾರವನ್ನು ಹೊಗಳಿದ್ದಾರೆ. ದೇಶದ ನಾಗರಿಕರಿಗೆ ಕೊರೊನಾ ಲಸಿಕೆ ನೀಡುವ ಮೂಲಕ ಅವರನ್ನು ಸೋಂಕಿನಿಂದ ಪಾರು ಮಾಡಲು ಪ್ರಯತ್ನಿಸುತ್ತಿರುವ ಭಾರತದ ಪಾಲಿಗೆ ಇದು ಅತ್ಯಂತ ಮಹತ್ವದ ದಿನ. ಇಂದಿನಿಂದ 12-14ನೇ ವರ್ಷ ವಯಸ್ಸಿನವರಿಗೂ ಕೊವಿಡ್​ 19 ಲಸಿಕೆ ನೀಡಿಕೆ ಪ್ರಾರಂಭವಾಗಿದೆ. ಹಾಗೇ, 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಮುನ್ನೆಚ್ಚರಿಕಾ ಡೋಸ್​ ನೀಡಿಕೆಯೂ ಶುರುವಾಗಲಿದೆ. ಇಂದಿನಿಂದ ಶುರುವಾದ ಹಂತದಲ್ಲಿ ಯಾರೆಲ್ಲ ಲಸಿಕೆ ಪಡೆಯಲು ಅರ್ಹರಿದ್ದಾರೋ, ಅವರು ಬೇಗನೇ ಕೊವಿಡ್ 19 ಲಸಿಕೆ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.
 
ಭಾರತದ ಲಸಿಕೆ ಅಭಿಯಾನವನ್ನು ವಿಜ್ಞಾನ-ಚಾಲಿತ ಎಂದೇ ಉಲ್ಲೇಖಿಸಿರುವ ಪ್ರಧಾನಿ ಮೋದಿ, 2020ರಲ್ಲಿ ನಮ್ಮ ದೇಶದಲ್ಲಿ ಕೊರೊನಾ ಲಸಿಕೆ ತಯಾರಿಕೆ ಶುರುವಾಯಿತು. ನಮ್ಮ ದೇಶದ ನಾಗರಿಕರನ್ನು ಕೊರೊನಾ ಸೋಂಕಿನಿಂದ ರಕ್ಷಿಸುವಲ್ಲಿ ಇದು ಬಹುಮುಖ್ಯವಾಗಿದೆ. ನಮ್ಮ ಕೊರೊನಾ ಲಸಿಕೆ ತಯಾರಿಕೆ ಪ್ರಯತ್ನಕ್ಕೆ ವಿಜ್ಞಾನಿಗಳು, ಸಂಶೋಧಕರು, ಖಾಸಗಿ ವಲಯದವರು ನೀಡಿದ ಸಹಕಾರ, ಅವರು ತೆರೆದುಕೊಂಡ ರೀತಿ ನಿಜಕ್ಕೂ ಶ್ಲಾಘನೀಯ. 2020ರ ಕೊನೆಯಲ್ಲಿ ನಾನು ಮೂರು ಲಸಿಕಾ ತಯಾರಿಕಾ ಸಂಸ್ಥೆಗಳಿಗೆ ಭೇಟಿ ನೀಡಿದ್ದೆ. ಲಸಿಕೆಗಳು ನಾಗರಿಕರನ್ನು ಹೇಗೆ ರಕ್ಷಣೆ ಮಾಡುತ್ತವೆ, ದೇಹದೊಳಗೆ ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬ ವಿವರಗಳನ್ನು ತಯಾರಕರ ಬಳಿಯಿಂದಲೇ ಕೇಳಿದ್ದೆ ಎಂದು ಹಳೇ ದಿನಗಳನ್ನು ನೆನಪಿಸಿಕೊಂಡರು.ಇಂದಿನಿಂದ ದೇಶದಲ್ಲಿ ಮತ್ತೊಂದು ಹಂತದ ಕೊರೊನಾ ಲಸಿಕೆ ನೀಡಿಕೆ ಅಭಿಯಾನ ಶುರುವಾಗಿದೆ. 12-14ವರ್ಷದವರಿಗೆ ಕೊರೊನಾ ಲಸಿಕೆ ನೀಡಲಾಗುತ್ತಿದೆ. ಈ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸರಣಿ ಟ್ವೀಟ್​ ಮಾಡಿ, ಕೊರೊನಾ ವಿರುದ್ಧ ದೇಶ ಹೋರಾಡುತ್ತಿರುವ ರೀತಿ ಮತ್ತು ಅದಕ್ಕೆ ಜನರು ನೀಡುತ್ತಿರುವ ಸಹಕಾರವನ್ನು ಹೊಗಳಿದ್ದಾರೆ. ದೇಶದ ನಾಗರಿಕರಿಗೆ ಕೊರೊನಾ ಲಸಿಕೆ ನೀಡುವ ಮೂಲಕ ಅವರನ್ನು ಸೋಂಕಿನಿಂದ ಪಾರು ಮಾಡಲು ಪ್ರಯತ್ನಿಸುತ್ತಿರುವ ಭಾರತದ ಪಾಲಿಗೆ ಇದು ಅತ್ಯಂತ ಮಹತ್ವದ ದಿನ. ಇಂದಿನಿಂದ 12-14ನೇ ವರ್ಷ ವಯಸ್ಸಿನವರಿಗೂ ಕೊವಿಡ್​ 19 ಲಸಿಕೆ ನೀಡಿಕೆ ಪ್ರಾರಂಭವಾಗಿದೆ. ಹಾಗೇ, 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಮುನ್ನೆಚ್ಚರಿಕಾ ಡೋಸ್​ ನೀಡಿಕೆಯೂ ಶುರುವಾಗಲಿದೆ. ಇಂದಿನಿಂದ ಶುರುವಾದ ಹಂತದಲ್ಲಿ ಯಾರೆಲ್ಲ ಲಸಿಕೆ ಪಡೆಯಲು ಅರ್ಹರಿದ್ದಾರೋ, ಅವರು ಬೇಗನೇ ಕೊವಿಡ್ 19 ಲಸಿಕೆ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.
 
ಭಾರತದ ಲಸಿಕೆ ಅಭಿಯಾನವನ್ನು ವಿಜ್ಞಾನ-ಚಾಲಿತ ಎಂದೇ ಉಲ್ಲೇಖಿಸಿರುವ ಪ್ರಧಾನಿ ಮೋದಿ, 2020ರಲ್ಲಿ ನಮ್ಮ ದೇಶದಲ್ಲಿ ಕೊರೊನಾ ಲಸಿಕೆ ತಯಾರಿಕೆ ಶುರುವಾಯಿತು. ನಮ್ಮ ದೇಶದ ನಾಗರಿಕರನ್ನು ಕೊರೊನಾ ಸೋಂಕಿನಿಂದ ರಕ್ಷಿಸುವಲ್ಲಿ ಇದು ಬಹುಮುಖ್ಯವಾಗಿದೆ. ನಮ್ಮ ಕೊರೊನಾ ಲಸಿಕೆ ತಯಾರಿಕೆ ಪ್ರಯತ್ನಕ್ಕೆ ವಿಜ್ಞಾನಿಗಳು, ಸಂಶೋಧಕರು, ಖಾಸಗಿ ವಲಯದವರು ನೀಡಿದ ಸಹಕಾರ, ಅವರು ತೆರೆದುಕೊಂಡ ರೀತಿ ನಿಜಕ್ಕೂ ಶ್ಲಾಘನೀಯ. 2020ರ ಕೊನೆಯಲ್ಲಿ ನಾನು ಮೂರು ಲಸಿಕಾ ತಯಾರಿಕಾ ಸಂಸ್ಥೆಗಳಿಗೆ ಭೇಟಿ ನೀಡಿದ್ದೆ. ಲಸಿಕೆಗಳು ನಾಗರಿಕರನ್ನು ಹೇಗೆ ರಕ್ಷಣೆ ಮಾಡುತ್ತವೆ, ದೇಹದೊಳಗೆ ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬ ವಿವರಗಳನ್ನು ತಯಾರಕರ ಬಳಿಯಿಂದಲೇ ಕೇಳಿದ್ದೆ ಎಂದು ಹಳೇ ದಿನಗಳನ್ನು ನೆನಪಿಸಿಕೊಂಡರು.

Share this Story:

Follow Webdunia kannada

ಮುಂದಿನ ಸುದ್ದಿ

ನಾಯಿ ಬೊಗಳುತ್ತದೆ ಎಂದು ಚಾಕುವಿನಿಂದ ಇರಿದು ಕೊಲೆ!