Select Your Language

Notifications

webdunia
webdunia
webdunia
webdunia

ನಾಯಿ ಬೊಗಳುತ್ತದೆ ಎಂದು ಚಾಕುವಿನಿಂದ ಇರಿದು ಕೊಲೆ!

Dog stabbed to death with a knife
bangalore , ಗುರುವಾರ, 17 ಮಾರ್ಚ್ 2022 (20:30 IST)
ದೆಹಲಿಯ ಕಲ್ಯಾಣಪುರಿ ಪ್ರದೇಶದಲ್ಲಿ ವ್ಯಕ್ತಿಯೋರ್ವ ಬೀದಿನಾಯಿಯನ್ನು ಇರಿದು ಕೊಂದಿದ್ದಾನೆ. ನಾಯಿ ಸದಾ ಬೊಗಳುತ್ತಿತ್ತು ಎಂಬ ಕಾರಣಕ್ಕೆ ಕೋಪಗೊಂಡು ಆ ನಾಯಿಯನ್ನು ಕೊಂದಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ.ಬೀದಿ ನಾಯಿಗಳ ಮೇಲೆ ದೌರ್ಜನ್ಯ ನಡೆದ ಘಟನೆಗಳು ಆಗಾಗ ಬೆಳಕಿಗೆ ಬರುತ್ತಲೇ ಇರುತ್ತವೆ. ಇತ್ತೀಚೆಗಷ್ಟೆ ಕಾಮುಕನೊಬ್ಬ ಬೀದಿ ನಾಯಿಯ (Stray Dog) ಮೇಲೆ ಅತ್ಯಾಚಾರ (Rape) ನಡೆಸಿದ್ದ ಘಟನೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು. ವಿನಾಕಾರಣ ಬೀದಿ ನಾಯಿಗಳಿಗೆ ಥಳಿಸುವುದು, ಅವುಗಳ ಮೇಲೆ ವಾಹನ ಹತ್ತಿಸಿಕೊಂಡು ಹೋಗುವುದು ಹೀಗೆ ನಾಯಿಗಳ ಮೇಲಿನ ದೌರ್ಜನ್ಯಗಳು ನಡೆಯುತ್ತಲೇ ಇರುತ್ತವೆ. ಇದೀಗ ದೆಹಲಿಯ ಕಲ್ಯಾಣಪುರಿ ಪ್ರದೇಶದಲ್ಲಿ ವ್ಯಕ್ತಿಯೋರ್ವ ಬೀದಿನಾಯಿಯನ್ನು ಇರಿದು ಕೊಂದಿದ್ದಾನೆ. ನಾಯಿ ಸದಾ ಬೊಗಳುತ್ತಿತ್ತು ಎಂಬ ಕಾರಣಕ್ಕೆ ಕೋಪಗೊಂಡು ಆ ನಾಯಿಯನ್ನು ಕೊಂದಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ.
 
ರಾತ್ರಿ ವೇಳೆ ಜೋರಾಗಿ ಬೊಗಳುತ್ತಿದ್ದ ಬೀದಿ ನಾಯಿಯಿಂದ ಮನೆಯೊಳಗೆ ನೆಮ್ಮದಿಯಾಗಿರಲು ಸಾಧ್ಯವಾಗುತ್ತಿರಲಿಲ್ಲ. ಹಗಲು ಹೊತ್ತಿನಲ್ಲೂ ರಸ್ತೆಯಲ್ಲಿ ಯಾರಾದರೂ ಓಡಾಡಿದರೆ ನಾಯಿ ಬೊಗಳಲು ಶುರು ಮಾಡುತ್ತಿತ್ತು. ಇದರಿಂದ ಆ ನಾಯಿಯನ್ನು ಕೊಂದಿದ್ದೇನೆ ಎಂದು ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ.ಈ ಘಟನೆಯ ಕುರಿತು ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಆರೋಪಿಯ ವಿರುದ್ಧ ಪ್ರಾಣಿಗಳ ಮೇಲಿನ ಕ್ರೌರ್ಯದ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕ ಟೆಕ್ನಿಕಲ್ ಪ್ಯಾನೆಲ್ ನಿಂದ ಕೊರೊನಾ ಎಚ್ಚರಿಕೆ