ರಾಯ್ಪುರ : ಅಸಹಜ ಲೈಂಗಿಕ ಸಂಭೋಗಕ್ಕೆ ನಿರಾಕರಿಸಿದ್ದಕ್ಕೆ ಅಪ್ರಾಪ್ತ ಬಾಲಕನನ್ನು 20 ವರ್ಷದ ಯುವಕನೊರ್ವ ಚಾಕುವಿನಿಂದ ಇರಿದು ಕೊಂದಿರುವ ಘಟನೆ ಛತ್ತೀಸ್ಗಢದ ಬೆಮೆತಾರಾ ಜಿಲ್ಲೆಯಲ್ಲಿ ನಡೆದಿದೆ.
ಆರೋಪಿಯನ್ನು ಪಂಕಜ್ ವಿಶ್ವಕರ್ಮ ಎಂದು ಗುರುತಿಸಲಾಗಿದ್ದು, ಬಿಜಭಟ ಮುರುಮ್ ಗಣಿ ಸಮೀಪದ ಪ್ರತ್ಯೇಕ ಸ್ಥಳಕ್ಕೆ ಸೋಮವಾರ ಬಾಲಕನನ್ನು ಕರೆದೊಯ್ದು ಹರಿತವಾದ ಆಯುಧದಿಂದ ಕೊಂದಿದ್ದಾನೆ.
ಬಾಲಕ ಕಾಣೆಯಾಗಿರುವುದಾಗಿ ಬಾಲಕನ ಪೋಷಕರು ದೂರು ದಾಖಲಿಸಿದ ಬಳಿಕ ಪೊಲೀಸರು ತನಿಖೆ ಆರಂಭಿಸಿದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಇದೀಗ ಆರೋಪಿಗಾಗಿ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ.
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!