Select Your Language

Notifications

webdunia
webdunia
webdunia
webdunia

ಲಸಿಕೆ ಬೇಡ ಎಂದು ಚಾಕು ಹಿಡಿದು ಮರವೇರಿದ!

ಚೆನ್ನೈ
ಚೆನ್ನೈ , ಭಾನುವಾರ, 2 ಜನವರಿ 2022 (17:05 IST)
ಚೆನ್ನೈ : ಆರೋಗ್ಯ ಕಾರ್ಯಕರ್ತರು ಕೋವಿಡ್ ಲಸಿಕೆಯನ್ನು ನೀಡಲು ಬಂದಾಗ ವ್ಯಕ್ತಿಯೊಬ್ಬ ಅವರಿಂದ ತಪ್ಪಿಸಿಕೊಳ್ಳಲು ಚಾಕು ಹಿಡಿದು ಮರ ಏರಿ ಕುಳಿತ ಘಟನೆ ತಮಿಳುನಾಡಿನ ಪುದುಚೇರಿಯಲ್ಲಿ ನಡೆದಿದೆ.

ಪುದುಚೇರಿಯ ವಿಲಿಯನೂರ್ ಗ್ರಾಮದ ಮಧ್ಯವಯಸ್ಕ ನಿವಾಸಿಯೊಬ್ಬ ಕೋವಿಡ್ ಲಸಿಕೆ ನೀಡಲು ಆರೋಗ್ಯ ಅಧಿಕಾರಿಗಳು ಗ್ರಾಮಕ್ಕೆ ಬಂದಾಗ ಅವರನ್ನು ಕಂಡ ತಕ್ಷಣ ಮರ ಏರಿ ಕುಳಿತಿದ್ದಾನೆ. ಲಸಿಕೆಯನ್ನು ಪಡೆಯಲು ಇಷ್ಟವಿರದ ವ್ಯಕ್ತಿ ಚಾಕುವಿನಿಂದ ಕೊಂಬೆಯನ್ನು ಕತ್ತರಿಸಲು ಪ್ರಾರಂಭಿಸಿದ್ದನು. 

ಸರ್ಕಾರದ ಮಾರ್ಗಸೂಚಿಯ ಭಾಗವಾಗಿ ಪುದುಚೇರಿಯ ಜನರಿಗೆ ಶೇ. 100 ರಷ್ಟು ಲಸಿಕೆಗಳನ್ನು ಹಾಕಿಸುವ ಪ್ರಯತ್ನದಲ್ಲಿದೆ. ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ತೆರಳಿ ಲಸಿಕೆಯನ್ನು ನೀಡುತ್ತಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಕಸದಿಂದ ಗೊಬರ ತಯಾರು ಯಂತ್ರ ಉದ್ಘಾಟಿಸಿದ ಸಿಎಂ